ಶೃಂಗೇರಿ ಮಠದ ಬಗ್ಗೆ ಡಿಕೆಶಿ ಗುಣಗಾನ!
– ಶೃಂಗೇರಿಯಲ್ಲಿ ನಡೆದ ಐತಿಹಾಸಿಕ ಸ್ತೋತ್ರ ತ್ರಿವೇಣಿಯ ಸಮರ್ಪಣೆಯಲ್ಲಿ ಭಾಗಿ
– ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಟಕ್ಕರ್
NAMMUR EXPRESS NEWS
ಶೃಂಗೇರಿ: ಇಂದು ಬಹಳ ಪವಿತ್ರವಾದ ದಿನ, 50 ವರ್ಷ ಕಳೆದಿದೆ. ಯಾರು ಧರ್ಮವನ್ನು ಕಾಪಾಡುತ್ತಾರೋ ಧರ್ಮ ಅವರನ್ನು ಕಾಪಾಡುತ್ತದೆ. ಯಾವ ರಾಜಕಾರಣಕ್ಕೂ ಹೋಗದೆ ಯಾವ ವಿಚಾರಕ್ಕೂ ಕೂಡ ಈ ಮಠ ಯಾವುದಕ್ಕೂ ಭಾಗಿಯಾಗದೆ. ಅವರ ಕರ್ತವ್ಯ ಹಾಗೂ ಪಾಲನೆಯನ್ನು ಮಾಡುತ್ತಿದೆ. ದೇವರ ಆಶೀರ್ವಾದ, ಸಂಸ್ಕೃತಿ, ಸಂಸ್ಕಾರ ಎಲ್ಲವನ್ನ ಕಾಪಾಡಿಕೊಂಡು ಬಂದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶೃಂಗೇರಿಯಲ್ಲಿ ನಡೆದ ಐತಿಹಾಸಿಕ ಸ್ತೋತ್ರ ತ್ರಿವೇಣಿಯ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಿಕೆಮಠದ ಬಗ್ಗೆ ನನಗೆ ವಿಶೇಷವಾದ ಗೌರವ ಹಾಗೂ ಭಕ್ತಿ ಇದೆ. ಇಲ್ಲಿ ಸರಸ್ವತಿ ತಾಂಡವ ಆಡುತ್ತಿದ್ದಾಳೆ. ರಾಜೀವ್ ಗಾಂಧಿ ಅವರು ಹಿಂದಿನ ಕಾಲದಲ್ಲಿ ಸಂಸ್ಕೃತ ವಿದ್ಯಾಪೀಠ ಮಾಡಬೇಕು ಎಂದು ಹೇಳಿ ಸಂಸ್ಕೃತದ ವಿದ್ಯಾಪೀಠದ ಯೂನಿವರ್ಸಿಟಿಯನ್ನ ಮಾಡಲು ಹೋದರು. ಇಲ್ಲಿ ಬಂದು ಆಶೀರ್ವಾದ ಹಾಗೂ ಸಹಕಾರವನ್ನು ಪಡೆದು ಹೋಗಿದ್ದರು. ಸರ್ಕಾರದ ಪರವಾಗಿ ನಾನು ವೈಯಕ್ತಿಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಾನು ಪ್ರತಿದಿನ ಪೂಜೆ ಮಾಡುತ್ತೇನೆ ಹಾಗೂ ಧರ್ಮದ ಬಗ್ಗೆ ನಂಬಿಕೆ ಕೂಡ ಇದೆ. ನನ್ನ ಒಳಿತಿಗಾಗಿ, ರಾಜ್ಯದ ಒಳಿತಿಗಾಗಿ, ನಂಬಿದಂತಹ ಜನಗಳಿಗಾಗಿ, ಸಮಾಜದ ಒಳಿತಾಗಲಿ ಎಂದು ಪ್ರಾರ್ಥನೆಯನ್ನು ಮಾಡುತ್ತೇನೆ ಎಂದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ!
ಚುನಾವಣೆ ಬಂದಾಗ ಚುನಾವಣೆ ಮಾಡೋಣ, ಪ್ರತಿಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮಾಡುತ್ತಿದ್ದಾರೆ ಅವರ ಬಗ್ಗೆ ಯೋಚನೆ ಮಾಡುವುದರಲ್ಲಿ ಫಲವಿಲ್ಲ. ರಾಜ್ಯದ್ಯಕ್ಷರಾಗಿ ಹೇಗೆ ರಾಜ್ಯವನ್ನು ಹೇಗೆ ಉಳಿಸಬೇಕು ಅದಕ್ಕೆ ನಾವು ತಯಾರಿಯಾಗೋಣ ಎಂದು ಹೇಳಿದರು.
ರಾಜಕೀಯ ಗಣ್ಯರ ದಂಡು!
ಶೃಂಗೇರಿಯ ಪ್ರಸಿದ್ಧ ಶಾರದಾ ಪೀಠದ ಮಠದಲ್ಲಿ ಹಮ್ಮಿಕೊಂಡಿದ್ದ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ 50ನೇ ವರ್ಷಾಚರಣೆಯ ಸುವರ್ಣ ಭಾರತೀ ಹಾಗೂ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ ಮಂಜುನಾಥ ಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಶೃಂಗೇರಿ ಶಾಸಕರಾದ ರಾಜೇಗೌಡ, ಮಾಜಿ ಸಚಿವ ಜೀವರಾಜ್, ಜೆಡಿಎಸ್ ನಾಯಕ ಸುಧಾಕರ್ ಶೆಟ್ಟಿ, ಸೇರಿ ಬಹುತೇಕ ರಾಜಕೀಯ ಗಣ್ಯರು ಹಾಜರಿದ್ದರು.