3 ವರ್ಷ ಆದ್ರೂ ಇನ್ನು ಬಸ್ ನಿಲ್ದಾಣ ಉದ್ಘಾಟನೆಗೊಂಡಿಲ್ಲ!
– ಕಡಬಗೆರೆಯಲ್ಲಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ, ಶೌಚಾಲಯ
– ಜನರ ಪರದಾಟ, ಬಸ್ ನಿಲ್ದಾಣ ಹೋರಾಟ ಸಮಿತಿಯ ಆಕ್ರೋಶ
ವಿಶೇಷ ವರದಿ: ಸಚಿನ್ ಶೃಂಗೇರಿ
NAMMUR EXPRESS NEWS
ಖಾಂಡ್ಯ/ಕಡಬಗೆರೆ: ಖಾಂಡ್ಯ ಹೋಬಳಿಯ ಕಡಬಗೆರೆಯಲ್ಲಿ ಸುಮಾರು ಮೂರು ವರ್ಷಗಳ ಅನೇಕ ಹೋರಾಟದ ಫಲವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.
ಬಸ್ ನಿಲ್ದಾಣ ಕಾಮಗಾರಿ ಶುರುವಾಗಿ 8 ತಿಂಗಳು ಕಳೆದರೂ ಇನ್ನೂ ಶೌಚಾಲಯ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು,ಪ್ರಯಾಣಿಕರು ತೀರಾ ತೊಂದರೆ ಅನುಭವಿಸುವಂತಾಗಿದ್ದು ಸ್ಥಳೀಯರು ಅನುಭವಿಸುತ್ತಿರುವ ಸಮಸ್ಯೆಗೊತ್ತಿದ್ದು ಕಾಮಗಾರಿ ಪೂರ್ಣಗೊಳಿಸದೇ ಕಟ್ಟಡ ಬಳಕೆಗೆ ಅನುವು ಮಾಡಿಕೊಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು,ಶಾಸಕರ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಳಂಬ ನೀತಿಯಿಂದ ಬೇಸರಗೊಂಡ ಜನರು ಮತ್ತು ಬಸ್ ನಿಲ್ದಾಣ ಹೋರಾಟ ಸಮಿತಿಯು ಇನ್ನು 10 ದಿನಳ ಡುವು ನೀಿದ್ದು ಅಷ್ಟರೊಳಗೆ ಸಾರ್ವಜನಿಕರ ಸೇವೆಗೆ ಬಸ್ ನಿಲ್ದಾಣ,ಶೌಚಾಲಯ ದೊಕರದೇ ಇದ್ದಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟಿಸೋದಾಗಿ ಎಚ್ಚರಿಕೆ ನೀಡಿದೆ.
ನಮ್ಮೂರ್ ಎಕ್ಸ್ಪ್ರೆಸ್ ಬಳಿ ಬಸ್ಸ್ ನಿಲ್ದಾಣ ಹೋರಾಟ ಸಮಿತಿ ಹೇಳಿದ್ದೇನು..??!!
ಸುಮಾರು 3 ವರ್ಷಗಳ ಕಾಲ ಕಡಬಗೆರೆ ಬಸ್ ನಿಲ್ದಾಣ ಸಮಿತಿಯವರು ಹೋರಾಟ ಮಾಡಿ ಎರಡು ಸಲ ಟಾರ್ಪಲ್ ಕಟ್ಟಿ ಪ್ರತಿಭಟನೆ ಮಾಡಿದ ಮೇಲೆ, ಒಂದು ಸಲ ಭಿಕ್ಷಾಟನೆ ಮಾಡಿ ಟಾರ್ಪಲ್ ಕಟ್ಟಿ ಬಸ್ ನಿಲ್ದಾಣ ಮಾಡಿದ್ದೆವು. ಆದುದರಿಂದ ನಿಲ್ದಾಣ ಕಾಮಗಾರಿ ಇಲ್ಲಿಯವರೆಗೆ ಬಂದು ನಿಂತಿದೆ. ಈಗ 8 ತಿಂಗಳು ದಾಟಿ ವರ್ಷವೇ ಆದ್ರೂ ಕಾಮಗಾರಿ ನಡೆಯುತ್ತಿಲ್ಲ, ಇನ್ನು ಒಂದು 10 ದಿನ ಕಾಯುತ್ತೇವೆ. ಸುತ್ತಮುತ್ತ ಹಳ್ಳಿಗಳಿಂದ ಸಾವಿರಾರು ಸಾರ್ವಜನಿಕರು, ಪ್ರಮುಖವಾಗಿ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಬರುತ್ತಾರೆ ಅವರಿಗೆ ಕೂರಲು ಹಾಗೂ ಸರಿಯಾದ ಶೌಚಾಲಯದ ವ್ಯವಸ್ಥೆಯಿಲ್ಲದೆ ತುಂಬಾ ಸಮಸ್ಯೆಯಾಗಿದೆ ಹಾಗು ನೂರಾರು ಶಾಲಾ ಮಕ್ಕಳು ಬಸ್ ನಿಲ್ದಾಣವಿಲ್ಲದೆ ಮಳೆ ಬಿಸಿಲು ಬಂದಾಗ ನಿಲ್ಲಲು ಸರಿಯಾದ ಸ್ಥಳವೂ ಇಲ್ಲದೆ ಮತ್ತು ಬಸ್ನವರಿಗೆ ಎಲ್ಲಿ ಬಸ್ ನಿಲ್ಲಿಸುವುದು ಎಂದು ಗೊಂದಲದಲ್ಲಿ ಇದ್ದಾರೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡದೇ ಇದ್ದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಸಿಇಓ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಬಸ್ ನಿಲ್ದಾಣ ಹೋರಾಟ ಸಮಿತಿ ಸದಸ್ಯರಾದ ಚಂದ್ರಶೇಖರ ರೈ ಯವರು ಈ ಮೂಲಕ ತಿಳಿಸಿದ್ದಾರೆ.