ಇಲ್ಲಿ ಎಲ್ಲಾ ಧರ್ಮದವರು ಸೇರಿ ಗಣೇಶ ಕೂರಿಸಿದರು!
– ಎನ್.ಆರ್ ಪುರ ತಾಲೂಕಿನ ರಾಜೀವ್ ನಗರದಲ್ಲಿ ವಿಶೇಷ
– ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಧರ್ಮದವರ ಸಮಾಗಮ
NAMMUR EXPRESS NEWS
ಎನ್.ಆರ್.ಪುರ: ಎನ್ ಆರ್ ಪುರ ಪಟ್ಟಣದ ರಾಜೀವ್ ನಗರದಲ್ಲಿ ಭಾವೈಕ್ಯತೆಯ ಗಣಪ ಗಮನ ಸೆಳೆದಿದೆ. ಸರ್ವಧರ್ಮದ ರಾಜೀವ್ ನಗರದ ಸಾರ್ವಜನಿಕರೆಲ್ಲರೂ ಸೇರಿ ಪ್ರತಿವರ್ಷ ಒಟ್ಟಾಗಿ ವಿನಾಯಕ ಸೇವಾ ಸಮಿತಿ ರಚಿಸಿಕೊಂಡು 3 ದಿನಗಳ ಗಣೇಶೋತ್ಸವವನ್ನು ಕಳೆದ 14 ವರ್ಷಗಳಿಂದ ಆಚರಿಸುತ್ತಿರುವುದು ವಿಶೇಷವಾಗಿದೆ.
ಪಟ್ಟಣ ಪಂಚಾಯ್ತಿ ಸದಸ್ಯೆ ಹಾಗೂ ಸಮಾಜ ಸೇವಕಿ ಜುಬೇದ ಸತತ 14 ವರ್ಷದಿಂದಲೂ ಈ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿ ಉತ್ಸವದ ಜವಾಬ್ದಾರಿ ವಹಿಸಿದ್ದಾರೆ. ಪ್ರಧಾನಕಾರ್ಯದರ್ಶಿಯಾಗಿ ಮಗೇಶ,ಬುದ್ದೇಶ ಮತ್ತು ಖಜಾಂಚಿಯಾಗಿ ಸುಜಾತ ಸೇರಿ ಅನೇಕ ಸದಸ್ಯರು ಇದ್ದಾರೆ. ಈ ಸೇವಾ ಸಮಿತಿಯಲ್ಲಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಸಮುದಾಯದ ಸದಸ್ಯರಿದ್ದು ಎಲ್ಲರೂ ಒಟ್ಟಾಗಿ ಹಿಂದೂ ಸಂಪ್ರದಾಯದಂತೆ 3 ದಿನಗಳ ಕಾಲ ಪೂಜೆ,ಸಂ್ಕೃತಿಕ ಕಾರ್ಯಕ್ರಮ,ಗಣಪತಿ ವಿಸರ್ಜನೆ ನಡೆಸಿಕೊಂಡು ಬಂದಿದ್ದು ಇದು ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.