ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ
– ಮತ್ತೆ ಹೆಚ್ಚಿದ ತುಂಗಾ ನದಿ ನೀರು: ಜನರಲ್ಲಿ ಹೆಚ್ಚಿದ ಅನಾರೋಗ್ಯ
– ಅಪಘಾತ: ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ
NAMMUR EXPRESS NEWS
ಮೂಡಿಗೆರೆ/ಚಿಕ್ಕಮಗಳೂರು: ಕಳೆದೊಂದು ವಾರದಲ್ಲಿ ಮತ್ತೆ ಕಾಫಿ ನಾಡಲ್ಲಿ ಮಳೆ ಜೋರಾಗಿದೆ. ಮಳೆ ಕಾರಣ ನದಿ, ಹಳ್ಳಗಳಲ್ಲಿ ನೀರು ಹೆಚ್ಚಾಗಿದೆ.
ಚಿಕ್ಕಮಗಳೂರಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ದಾರಿ ಕಾಣದೆ ಚಾಲಕರ ನಿಯಂತ್ರಣ ತಪ್ಪಿ 2 ಪ್ರತ್ಯೇಕ ಅಪಘಾತ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಪಾರಾಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೆಬ್ಬರಿಗೆ, ನಜರತ್ ಸ್ಕೂಲ್ ಬಳಿ ಈ ಘಟನೆ ನಡೆದಿದೆ.
ಪೌಲ್ಸ್ ಎಂಬುವರ ಮನೆಗೆ ಕಾರೊಂದು ಗುದ್ದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮೇಲಿಂದ ಮೇಲೆ ಅಪಘಾತ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ. ಒಂದೇ ಜಗದಲ್ಲಿ ವರ್ದಲ್ಲಿ 60ಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ. ಮೇಲಿಂದ ಮೇಲೆ ಅನಾಹುತವಾದರೂ ಅಧಿಕಾರಿಗಳ ಮೌನಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಕೂಡಲೇ ರಸ್ತೆಯನ್ನು ದುರಸ್ಥಿ ಮಾಡುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಬ್ಯಾರಿಕೇಡ್ ಹಾಕಿದ್ದರೂ ಅದಕ್ಕೆ ಗುದ್ದಿ ವಾಹನಗಳಿಂದ ಅಪಘಾತವಾಗುತ್ತಿದೆ ಎಂದಿದ್ದಾರೆ. ಸದ್ಯ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜನರಲ್ಲಿ ಹೆಚ್ಚಿದ ಅನಾರೋಗ್ಯ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ, ಬಿಸಿಲು ಕಾರಣ ಜನರ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಜ್ವರ ಶೀತ ಹೆಚ್ಚಾಗಿದ್ದು ಆಸ್ಪತ್ರೆಗಳ ತುಂಬಾ ಜನ ಹೆಚ್ಚಿದೆ.