ಶೃಂಗೇರಿ ಶಾಸಕ ರಾಜೇಗೌಡರಿಗೆ ಮಹತ್ವದ ಹುದ್ದೆ!
– ಸಾರ್ವಜನಿಕ ಉದ್ದಿಮೆ ಸಮಿತಿ ಸದಸ್ಯರಾಗಿ ಆಯ್ಕೆ
– ಯಾರು ಯಾರು ಇದ್ದಾರೆ ಈ ಸಮಿತಿಯಲ್ಲಿ…?
NAMMUR EXPRESS NEWS
ಶೃಂಗೇರಿ: ವಿಧಾನ ಸಭೆಯ ಸಾರ್ವಜನಿಕ ಉದ್ದಿಮೆ ಸಮಿತಿ ಸದಸ್ಯರಾಗಿ ರಾಜೇಗೌಡ ಅವರು ನೇಮಕವಾಗಿದ್ದಾರೆ.
ವಿಧಾನಸಭೆಯ ಸದಸ್ಯರಾಗಿರುವ ತನ್ವೀರ್ ಸೇಠ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಶಾಸಕರಾದ ಬಸನಗೌಡ ಆರ್ ಪಾಟೀಲ್, ಜಿಕೆ ವೆಂಕಟಶಿವಾರೆಡ್ಡಿ, ಡಾ. ಸಿ ಎನ್ ಅಶ್ವಥ್ ನಾರಾಯಣ್, ಎಂ ಸತೀಶ್ ರೆಡ್ಡಿ, ಯು ಬಿ ಬಣಕಾರ್, ಡಾ. ಅಜಯ್ ಧರ್ಮಸಿಂಗ್, ಡಿ. ಜಿ ಶಾಂತನಗೌಡ, ಎಆರ್ ಕೃಷ್ಣಮೂರ್ತಿ, ಎಬಿ ರಮೇಶ ಬಂಡಿಸಿದ್ದೇಗೌಡ, ವಿನಯ್ ಕುಲಕರ್ಣಿ, ಬಿ ಎ ಬಸವರಾಜ, ಕಾಶಪ್ಪನವರ್ ಶಿವಶಂಕರಪ್ಪ ವಿಜಯಾನಂದ, ಟಿಡಿ ರಾಜೇಗೌಡ, ಜಿ ಜನಾರ್ದನ್ ರೆಡ್ಡಿ ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ನ ಸದಸ್ಯರಾಗಿ ಪ್ರಕಾಶ್ ಬಾಬಣ್ಣ ಹುಕ್ಕೇರಿ, ಎಸ್ ರವಿ, ನಿರಾಣಿ ಹನುಮಂತ ರುದ್ರಪ್ಪ, ಸಿ ಎನ್ ಮಂಜೇಗೌಡ, ಚಲವಾದಿ ಟಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮ 211(2) ರ ಮೇರೆಗೆ, ಮಾನ್ಯ ಸಭಾಧ್ಯಕ್ಷರು ಶ್ರೀ ತನ್ವೀರ್ ಸೇಠ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
HOW TO APPLY : NEET-UG COUNSELLING 2023