ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು
ಶೃಂಗೇರಿಯಲ್ಲಿ ಭಾರತೀಯ ಮಾನವಹಕ್ಕುಗಳ ಸಂಸ್ಥೆ ಶುರು
– ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಸಂಘಟನೆ
– ಶೃಂಗೇರಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶೃಂಗೇರಿ ವಿಭಾಗದ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಉದ್ಘಾಟನೆಗೊಂಡಿದೆ.
ತಾಲೂಕಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆ ಉದ್ಘಾಟಿಸಿದ ರಾಜ್ಯಾಧ್ಯಕ್ಷರಾದ ನಾರಾಯಣ ಜಿ. ಈಳಿಗೇರರವರು ಶೃಂಗೇರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯ, ತಾಲೂಕಿನ ನೂತನ ಪದಾಧಿಕಾರಿಗಳಿಗೆ ಸಂಸ್ಥೆಯ ಗುರುತಿನ ಕಾರ್ಡ್,ಆದೇಶ ಪ್ರತಿಯನ್ನು ಹಸ್ತಾಂತರಿಸಿದರು. ಸಾಮಾಜದಲ್ಲಿ ವಿವಿಧ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಧ್ವನಿಎತ್ತಿ,ಸಾರ್ವಜನಿಕರ ಧ್ವನಿಯಾಗ ಮಾನವ ಹಕ್ಕಗಳ ರಕ್ಷಿಸುವ ಜವಾಬ್ದಾರಿ ಎಲ್ಲಾ ತಂಡದ ಸದಸ್ಯರ ಮೇಲಿದೆ. ಮಾನವ ಹಕ್ಕುಗಳ ಪರವಾಗಿ ಧೈರ್ಯವಾಗಿ ಧ್ವನಿ ಎತ್ತುವಂತೆ ಹಾಗೂ ಕಾನೂನು ಗೌರವಿಸಿ ಕಾನೂನಿನಡಿಯಲ್ಲಿ ಎಲ್ಲರೂ ನ್ಯಾಯಯುತವಾದ ಸಮಾಜ ನಿರ್ಮಾಣದ ಜವಾಬ್ದಾರಿ ನಿಭಾಯಿಸುವಂತೆ ಕರೆನೀಡಿದರು. ವೇದಿಕೆಯಲ್ಲಿದ್ದ ಪೋಲೀಸ್ ಉಪನಿರೀಕ್ಷಕರಾದ ಶ್ರೀಜಕ್ಕಣ್ಣನವರ್ ಮಾತನಾಡಿ ಇಂತಹ ಸಂಘ ಸಂಸ್ಥೆಗಳಿಂದ ಸಮಾಜದಲ್ಲಿ ಕಾನೂನಿನ ಬಗ್ಗೆ ಅರಿವು ಮೂಡುತ್ತದೆ,ಜನರಿಗೆ ಸಹಕಾರಿಯಾಗುತ್ತವೆ ಎಂದು ಕೆಲ ಕಾನೂನು ನಿಯಮಗಳನ್ನು ತಿಳಿಸಿದರು. ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾದ ಜೆ.ಗಿರಿಧರ್ರವರು ಸಂಸ್ಥೆಯ ಎಲ್ಲಾ ನೂತನ ಪದಾಧಿಕಾರಿಗಳಿಗೆ ಶುಭಾಶಯ ತಿಳಿಸಿ ಒಟ್ಟಾಗಿ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಡಲು ಕರೆ ನೀಡಿದರು.
ಶೃಂಗೇರಿ ವಿಭಾಗದ ಪದಾಧಿಕಾರಿಗಳಾಗಿ ಮೋಹನ್ ಜಿ.ವಿ,ಸಚಿನ್ ಗುಬ್ಬಗೋಡು,ನವೀನ್,ಬಾಲಗಂಗಾಧರ್,ಗೋವಿಂದ,ಮಹೇಶ್,ವೇಣುಗೋಪಾಲ್ ಭಟ್ ಇವರುಗಳು ಅಧಿಕಾರ ಸ್ವೀಕರಿಸಿದರು.