ಮತ್ತೆ ಕೊಪ್ಪ ಬಂದ್ ಎಚ್ಚರಿಕೆ ನೀಡಿದ ಜೀವರಾಜ್!
– ಕೊಟ್ಟ ಗಡುವು ಒಳಗೆ ಭರವಸೆ ಈಡೇರಿಸದಿದ್ದರೆ ಬಂದ್
– ಕೊಪ್ಪ ಸೇರಿ ಎಲ್ಲಾ ಜನರೂ ಕಲುಷಿತ ನೀರು ಕುಡಿಯಬೇಕಾ?
NAMMUR EXPRESS NEWS
ಕೊಪ್ಪ: ಕೊಪ್ಪ ಹಿರಿಕೆರೆ ಕಲುಷಿತ ನೀರಿನ ಸಮಸ್ಯೆ ಇದೀಗ ಪ್ರತಿಭಟನೆ ಹಾದಿ ಹಿಡಿದಿದೆ.
ಕೊಪ್ಪ ಪಟ್ಟಣದ ಜನರು ಕುಡಿಯುವ ನೀರಿಗಾಗಿ ಪಟ್ಟಣ ಸಮೀಪದಲ್ಲಿರುವ ಹಿರಿಕೆರೆಯನ್ನು ಆಶ್ರಯಿಸಬೇಕಾಗಿದೆ. ಕೊಪ್ಪ ಪಟ್ಟಣಿಗರು ಮಾತ್ರ ಹಿರಿಕೆರೆ ನೀರು ಕುಡಿಯುವುದಿಲ್ಲ. ಪಟ್ಟಣಕ್ಕೆ ವಿವಿಧ ಕೆಲಸ ಗಳಿಗಾಗಿ ಶೃಂಗೇರಿ, ನರಸಿಂಹರಾಜಪುರ, ತೀರ್ಥಹಳ್ಳಿ ಮುಂತಾದ ಭಾಗಗಳಿಂದ ಕೊಪ್ಪಕ್ಕೆ ಬರುವ ಇತರರು ಈ ಲೇಔಟ್ ಕಾಮಗಾರಿಯಿಂದಾಗಿ ಕಲ್ಮಶ ನೀರನ್ನೇ ಕುಡಿಯುವ ಸಂಗತಿ ಬಂದಿದೆ.ಕೊಟ್ಟ ಗಡುವು ಮುಗಿಯುತ್ತಾ ಬಂದಿದೆ. ಜನಸಾಮಾನ್ಯರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಲೇಔಟ್ ಕಾಮಗಾರಿ ಸ್ಥಗಿತಗೊಳಿಸಬೇಕು. ಸ್ಥಗಿತಗೊಳಿಸದೆ ಇದ್ದಲ್ಲಿ ಕೊಪ್ಪ ಬಂದ್ಗೆ ಕರೆಕೊಡುತ್ತೇವೆ ಎಂದು ಮಾಜಿ ಸಚಿವ, ಮಾಜಿ ಶಾಸಕ ಡಿ. ಎನ್ ಜೀವರಾಜ್ ಎಚ್ಚರಿಕೆ ನೀಡಿದ್ದಾರೆ.
ಕೊಪ್ಪದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾಜಿ ಸಚಿವರಾದ ಜೀವರಾಜ್ ಎಚ್ಚರಿಕೆ ನೀಡಿದ್ದಾರೆ.