ಕನ್ನಡ ಸಾಹಿತ್ಯ ಹಬ್ಬ: ವಿಷಯ ಮಂಡನೆಗೆ ಶಿಕ್ಷಕ ರವೀಂದ್ರ ಆಯ್ಕೆ.
– ಡಿ.21ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
– ಕೊಪ್ಪ ತಾಲೂಕಿನ ಲೋಕನಾಥಪುರ ಪ್ರೌಢಶಾಲೆಯ ಕನ್ನಡ ಶಿಕ್ಷಕ
NAMMUR EXPRESS NEWS
ಕೊಪ್ಪ: ಡಿ.21 ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ అಖಿల ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಿಗ್ಗೆ 9.30 ನಂತರ ಸಮಾನಾಂತರ ವೇದಿಕೆ 2 ರಲ್ಲಿ ಹಿರಿಯ ಮಕ್ಕಳ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ‘ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ’ ವಿಚಾರಗೋಷ್ಠಿ ನಡೆಯಲಿದ್ದು ಈ ಗೋಷ್ಠಿಯಲ್ಲಿ ಕೊಪ್ಪ ತಾಲ್ಲೂಕಿನ ಲೋಕನಾಥಪುರ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಆರ್.ಡಿ.ರವೀಂದ್ರ ಅವರು ‘ಪೌರಾಣಿಕ ಕಾವ್ಯಗಳು, ನೀತಿ ಪ್ರಧಾನ ಕತೆಗಳು’ ಎಂಬ ವಿಷಯ ಮಂಡಿಸಲಿದ್ದಾರೆ.