ಮತ್ತೆ ಕಸ್ತೂರಿ ರಂಗನ್ ವರದಿ ಭೂತದ ಸದ್ದು!
– ಮಲೆನಾಡಿನಲ್ಲಿ ಸಾವಿರಾರು ಹಳ್ಳಿಗಳು ಅರಣ್ಯ ವ್ಯಾಪ್ತಿಗೆ?
– ಮತ್ತೆ ಶುರುವಾಯ್ತಾ ಈ ಪ್ರಕ್ರಿಯೆ… ಏನಿದು?
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಂತರ್ ರಾಜ್ಯ ಸಚಿವರ ಜೊತೆ ನಡೆದ ಸಮಾವೇಶವೊಂರಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿದ್ಯತೆಯನ್ನು ಸಂರಕ್ಷಿಸಲು ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಹೇಳಿಕೆ ಈಗ ಮಲೆನಾಡಿಗರ ಆತಂಕಕ್ಕೆ ಕಾರಣ ಆಗಿದೆ. ಹತ್ತಾರು ವರ್ಷಗಳಿಂದ ಈ ಯೋಜನೆ ಬಗ್ಗೆ ಮಲೆನಾಡು ಭಾಗದ ಜನರಿಗೆ ಭಯ ಇದೆ. ಈ ಯೋಜನೆ ಜಾರಿ ಆದ್ರೆ ಸಾವಿರಾರು ಹಳ್ಳಿಗಳ ಲಕ್ಷ ಲಕ್ಷ ಜನ ತೊಂದರೆಗೆ ಒಳಗಾಗಲಿದ್ದಾರೆ.
ಪಶ್ಚಿಮ ಘಟ್ಟಗಳನ್ನು ಹೊಂದಿರುವ ರಾಜ್ಯದ 11 ಜಿಲ್ಲೆಗಳಿಗೆ ಅರಣ್ಯ ಕಾಯ್ದೆ 1980 ಅನ್ವಯಿಸುತ್ತದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಈ ಕಾಯ್ದೆಯ ಮೂಲಕ ಸಂರಕ್ಷಿಸುವ ಕೆಲಸ ನೆಡೆಯುತ್ತಿದೆ. ಮತ್ತೆ ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮನುಷ್ಯರನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆಯಂತೂ ಮೂಡುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದ ಜನರೊಂದಿಗೆ ಮಾತನಾಡದೆ, ಕಷ್ಟಗಳನ್ನು ಕೇಳದೆ, ಪರ್ಯಾಯ ವ್ಯವಸ್ಥೆ ಮಾಡದೆ ಹೀಗೆ ಯಾವುದೋ ಹೋಟೆಲಿನಲ್ಲಿ ಕುಳಿತು ಆಡುವ ಮಾತುಗಳು ಮಲೆನಾಡಿನಲ್ಲಿ ಕೋಲಾಹಲ ಮೂಡಿಸುತ್ತಿದೆ. ಇನ್ನು ಕೇರಳ ಮಾದರಿಯಲ್ಲಿ ಅಧ್ಯಯನ ಮಾಡಿ ಮತ್ತೊಮ್ಮೆ ಸರ್ವೇ ಮಾಡಬೇಕು ಎಂಬ ಕರ್ನಾಟಕದ ರೈತರ ದನಿ ಇನ್ನು ಸರ್ಕಾರಕ್ಕೆ ಕೇಳಿಲ್ಲ. ಎಲ್ಲಾ ಸರ್ಕಾರಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿವೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023