ಅದ್ದೂರಿಯಾಗಿ ತೆರೆಕಂಡ ಲಹರಿ ನೃತ್ಯೋತ್ಸವಂ-2024
– ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ಜನವೋ ಜನ
– ಇತಿಹಾಸದಲ್ಲೇ ಪ್ರಥಮ ರಾಜ್ಯಮಟ್ಟದ ಕಾರ್ಯಕ್ರಮವೆಂಬ ಹೆಗ್ಗಳಿಕೆ
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಅದ್ದೂರಿಯಾಗಿ ಸಮಾರೋಪಗೊಂಡಿತು. ನಾಟ್ಯ ವೈಭವ ನೃತ್ಯ ಅಕಾಡೆಮಿ ಸಂಯೋಜಿಸಿದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ನೃತ್ಯ ತಂಡಗಳು ವಿವಿಧ ಪ್ರಕಾರಗಳಲ್ಲಿ ಸ್ಪರ್ಧಿಸಿ ಬಹುಮಾನವನ್ನು ಪಡೆದವು. ಎರಡನೇ ದಿನ ಸ್ಥಳೀಯ ಮಕ್ಕಳಿಗೆ ರಾಧಾಕೃಷ್ಣ ವೇಷ ಸ್ಪರ್ಧೆ ಹಾಗೂ ನಾಟ್ಯ ವೈಭವ ನೃತ್ಯ ಅಕಾಡೆಮಿ ತಂಡದ ಕಲಾವಿದರಿಂದ ನೃತ್ಯ ಕಾರ್ಯಕ್ರಮಗಳ ಪ್ರದರ್ಶನವಿತ್ತು. ಒಟ್ಟಾರೆಯಾಗಿ ಒಂದು ಅಚ್ಚುಕಟ್ಟಾದ ಅದ್ದೂರಿ ಕಾರ್ಯಕ್ರಮದ ಆಯೋಜನೆಗೆ ಸ್ಥಳೀಯರಿಂದ ಮೆಚ್ಚುಗೆ ಗಳಿಸಿದ್ದಲ್ಲದೇ, ಶೃಂಗೇರಿಯ ಇತಿಹಾಸದಲ್ಲೇ ಪ್ರಥಮ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಎರಡು ದಿನಗಳ ಅದ್ದೂರಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ,ಎಲ್ಲಾ ಸಂಘ-ಸಂಸ್ಥೆಗಳಿಗೂ ಅಕಾಡೆಮಿಯ ಸ್ಥಾಪಕರು ಕಾರ್ಯಕ್ರಮದ ಆಯೋಜಕರೂ ಆದ ಸುನೀತಾ ನವೀನ್ ಗೌಡ ಧನ್ಯವಾದ ತಿಳಿಸುವುದರೊಂದಿಗೆ ಕೆಲವೇ ದಿನಗಳಲ್ಲಿ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯನ್ನು ಶೃಂಗೇರಿಯಲ್ಲಿ ಆಯೋಜಿಸಿ ಬೇರೆಬೇರೇ ರಾಜ್ಯಗಳ ಕಲಾವಿದರಿಗೆ ವೇದಿಕೆ ನೀಡುವ ಯೋಜನೆಯನ್ನು ಪ್ರಸ್ತಾಪಿಸಿದರು.