ಕೆರೆ ಅಭಿವೃದ್ಧಿಯೋ.,?? ಇಂಜಿನಿಯರ್ ಅಭಿವೃದ್ಧಿಯೋ..??
– ಗುಣವಂತೆ ಗ್ರಾಮದ ವಡ್ಡನಮಕ್ಕಿ ಕೆರೆ ಹೂಳಲ್ಲಿ ಗೋಲ್ಮಾಲ್
– ಕೊಪ್ಪ ತಾಲೂಕಿನಲ್ಲಿ ಕೆರೆ ಹಗರಣ?
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಹರಂದೂರು ಗ್ರಾ ಪಂ ವ್ಯಾಪ್ತಿಯ ಗುಣವಂತೆ ಗ್ರಾಮದ ವಡ್ಡನಮಕ್ಕಿ ಕೆರೆಯಲ್ಲಿ ಸರಿಯಾಗಿ ಹೂಳು ತೆಗೆಯದೇ ಅವ್ಯವಹಾರ ನಡೆಸಲಾಗಿದೆ ಎಂದು ಕೆರೆಯ ಸಮೀಪ ಕೆರೆಯು ತನಗಾದ,ತನ್ನ ಗ್ರಾಮದ ಜನರಿಗಾದ ಅನ್ಯಾಯವನ್ನು ಹೇಳಿಕೊಂಡು ಪ್ರಶ್ನಿಸಿದಂತೆ ಬ್ಯಾನರ್ ಅಳವಡಿಸಲಾಗಿದೆ.
ಹೂಳು ತೆಗೆಯುವ ಕಾಮಗಾರಿಯ ಹೆಸರಿನಲ್ಲಿ 3,79,384 ರೂ.ಗಳ ಬಿಲ್ ಮಾಡಿದ್ದು, ಆದರೆ ಕೆರೆಯಲ್ಲಿ ಕನಿಷ್ಠ 60,000 ರೂ.ಗಳ ಕೆಲಸವೂ ನಡೆದಿಲ್ಲ.ಇದರ ವಿರುದ್ಧ ಊರಿನ ಪ್ರಜ್ಞಾವಂತ ಹಿರಿಯರು, ಜನಪ್ರತಿನಿಧಿಗಳು ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಹೂಳು ತೆಗೆಯಲು ಕೊಪ್ಪ ಬಾಳಗಡಿಯಲ್ಲಿನ ಜಿ ಪಂ ಇಂಜಿನಿಯರ್ ಕಛೇರಿಯಲ್ಲಿ ಇಂಜಿನಿಯರ್ ನೀಡಿದ ಭರವಸೆಯನ್ನು ನಂಬಿ ಗ್ರಾಮದ ಜನರಿಗೆ ಉತ್ತಮ ನೀರು ಕೊಡಲು ಒಪ್ಪಿಕೊಂಡೆ,ಆದರೆ ಬಿಲ್ ಮಾಡಿ ಹಣ ಪಡೆದಿದ್ದಾನೆ ಆದರೆ ಕೆಲಸ ನಡೆದಿಲ್ಲ ಇದರಿಂದ ನನಗೆ ನನ್ನ ಗ್ರಾಮದ ಜನರಿಗೆ ಅನ್ಯಾಯವಾಗಿದೆ ಎಂದು ವಡ್ಡರಮಕ್ಕಿ ಕೆರೆಯೇ ಪ್ರಶ್ನಿಸುತ್ತಿರುವಂತೆ ಬ್ಯಾನರ್ ಅಳವಡಿಸಲಾಗಿದೆ.
ಬರಗಾಲವಿದ್ದರೂ ವ್ಯಕ್ತಿಯೊಬ್ಬರು ಈ ಕೆರೆಯ ಕೋಡಿ ಒಡೆದು ನೀರು ವ್ಯರ್ಥಮಾಡಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ.
ಈ ಭಾಗದ ಸುಮಾರು 10 ಎಕರೆ ಕೃಷಿ ಭೂಮಿಗೆ ನೀರು ಸರಬರಾಜಾಗುತ್ತಿತ್ತು,ಪ್ರಾಣಿ ಪಕ್ಷಿಗಳು ಈ ಕೆರೆಯ ನೀರನ್ನು ಆಶ್ರಯಿಸಿದ್ದವು. ಎರಡುದಿನಗಳ ಹಿಂದೆ ಇಬ್ಬರು ವ್ಯಕ್ತಿಗಳ ಜಗಳದಿಂದ ಕೆರೆ ಕೋಡಿ ಒಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವರ್ಷದ ಹಿಂದೆ ಕೆರೆಯಲ್ಲಿ ಹೂಳು ತೆಗೆಯಲಾಗಿದ್ದು,ಅಪೂರ್ಣ ಕಾಮಗಾರಿಯಾಗಿದೆ. ಈ ಬಗ್ಗೆ ನೀರಾವರಿ ಇಲಾಖೆ ಹಾಗೂ ತಹಶೀಲ್ದಾರರಿಗೂ ದೂರು ನೀಡಲಾಗಿದ್ದು ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.