ಶೃಂಗೇರಿಯಲ್ಲಿ ಬೃಹತ್ ರಕ್ತದಾನ ಶಿಬಿರ..
* ಜಗದ್ಗುರ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರ ಸ್ವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಶಿಬಿರ
* ಕಾರ್ಮಿಕ ಮಿತ್ರಬಳಗ ಮತ್ತು ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್ ಇವರ ಸಹಯೋಗದಲ್ಲಿ ಆಯೋಜನೆ
NAMMUR EXPRESS NEWS
ಶೃಂಗೇರಿ: ನಾಳೆ ದಿನಾಂಕ 05/01/2024 ರ ಭಾನುವಾರದಂದು ತಾಲೂಕಿನ ಕಾರ್ಮಿಕ ಮಿತ್ರ ವೃಂದ,ರಕ್ತದಾನಿಗಳು ವಾಟ್ಸ್ ಆಪ್ ಗ್ರೂಪ್,ಶ್ರೀಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್,ಶ್ರೀಭಾರತೀ ತೀರ್ಥ ಸದ್ಬಕ್ತ ಸಂಘ,ಜೆಸಿಐ ಘಟಕ,ಶೃಂಗಗಿರಿ ಖಾಸಗಿ ಕಟ್ಟಡ ಗುತ್ತಿಗೆದಾರರ ಸಂಘ,ಕ.ಸಾ.ಪ ಮಹಿಳಾ ಘಟಕ,ಆಟೋ ಚಾಲಕರು ಮತ್ತು ಮಾಲೀಕರ ಸಂಘ ಇವರುಗಳ ಸಹಯೋಗದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗರು ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಶ್ರೀಮಠದ ಶಾರದಾ ಕೃಪಾ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಎಲ್ಲಾ ರಕ್ತದಾನಿಗಳು,ಶ್ರೀಮಠದ ಭಕ್ತರು ಆಗಮಿಸಿ ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಬೆಳಿಗ್ಗೆ 9:30 ಕ್ಕೆ ಶ್ರೀಮಠದ ಶಾರದಾ ಕೃಪಾದಲ್ಲಿ ಜಗದ್ಗರುಗಳ ಆಪ್ತ ಸಹಾಯಕರಾದ ವೇದಬ್ರಹ್ಮ ಶ್ರೀ ಶಂ ನ ಕೃಷ್ಣಮೂರ್ತಿಗಳವರು ಶಿಬಿರ ಉದ್ಘಾಟಿಸಲಿದ್ದಾರೆ.