ಎನ್. ಆರ್. ಪುರ: ಭಾರೀ ಮಳೆ, ಹಲವೆಡೆ ಬಿದ್ದ ಮನೆ!
– ಬಾಳೆಹೊನ್ನೂರು, ಜಯಪುರ ಭಾಗದಲ್ಲಿ ಭಾರೀ ಹಾನಿ
– ಅಪಾಯದತ್ತ ಜನ ಜೀವನ: ಮನೆಯಿಂದ ಹೊರ ಹೋದ್ರೆ ಅಪಾಯ
– ಸೂಕ್ತ ಪರಿಹಾರಕ್ಕೆ ಮಾಜಿ ಶಾಸಕ ಜೀವರಾಜ್ ಪಟ್ಟು
NAMMUR EXPRESS ನ್ಯೂಸ್
ಎನ್ ಆರ್ ಪುರ: ಎನ್ ಆರ್ ಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅನೇಕ ಕಡೆ ಭಾರೀ ಹಾನಿ ಸಂಭವಿಸುತ್ತಿದೆ. ಈಗಾಗಲೇ ಹತ್ತಾರು ಮನೆಗಳು ಬಿದ್ದಿವೆ. ರಸ್ತೆಗಳು ಕುಸಿದಿವೆ. ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಳುಕೊಪ್ಪದ ಸಾಧು ಪೂಜಾರಿ ಅವರ ಮನೆ ಸಂಪೂರ್ಣ ಕುಸಿತಗೊಂಡಿದೆ. ಮನೆ ಕುಸಿತಗೊಂಡ ಸ್ಥಳಕ್ಕೆ ಮಾಜಿ ಸಚಿವರಾದ ಡಿ.ಎನ್ ಜೀವರಾಜ್ರವರು ಭೇಟಿ ನೀಡಿ ಪರಿಶೀಲನೆ ಮಾಡಿ, ತಹಸೀಲ್ದಾರ್ ಅವರಿಗೆ ಕರೆ ಮಾಡಿ ನೆರವು ನೀಡಲು ಸೂಚಿಸಿದರು.
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮನೆ ಕಳೆದುಕೊಂಡವರಿಗೆ ಯಡ್ಡಿಯೂರಪ್ಪ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು ಆದರೆ ಈ ಪರಿಹಾರ ಮೊತ್ತವನ್ನ ಕಾಂಗ್ರೆಸ್ 1 ಲಕ್ಷ ರೂಗೆ ಇಳಿಕೆ ಮಾಡಿದೆ. ಕ್ಷೇತ್ರದಲ್ಲಿ ಮನೆ ಹಾನಿಯಾದ ಪ್ರತಿಯೊಬ್ಬರಿಗೂ 5 ಲಕ್ಷ ಕೊಡಬೇಕು ಎಂದು ಆಗ್ರಹ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ವಕ್ತಾರಾದ ಎನ್.ಎಂ.ಕಾಂತ್ ರಾಜ್, ಪಂಚಾಯತ್ ಸದಸ್ಯರಾದ ಪ್ರವೀಣ್, ಬಣಗಿ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.