ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ ನವಚೇತನ ಚಾರಿಟೆಬಲ್ ಟ್ರಸ್ಟ್
– ಶೃಂಗೇರಿ ಸಹಾಯ ಹಸ್ತ ತಂಡ ಭಾಗಿ: ಮಂಜುನಾಥ್ ನಾಯಕತ್ವದಲ್ಲಿ ಸೇವೆ
– ಶೃಂಗೇರಿ, ಕೊಪ್ಪ ತಾಲೂಕಿನ ಹಲವು ಶಾಲೆಗಳಿಗೆ ವಿತರಣೆ
NAMMUR EXPRESS NEWS
ಜಗದ್ಗುರು ವಿದುಶೇಖರ ಭಾರತೀ ತೀರ್ಥ ಮಹಾಸ್ವಾಮಿಗಳ 32 ನೇ ವರ್ಧಂತಿ ಮಹೋತ್ಸದ ಶುಭ ಸಂದರ್ಭದಲ್ಲಿ ನವಚೇತನ ಚಾರಿಟೆಬಲ್ ರಾಮನಗರ ವತಿಯಿಂದ ಸರ್ಕಾರಿ ಶಾಲೆಯ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಮಾಡಲಾಯಿತು. ಟ್ರಸ್ಟ್ನ ಈ ಸೇವಾ ಕಾರ್ಯದಲ್ಲಿ ಶೃಂಗೇರಿ ಸಹಾಯ ಹಸ್ತ ತಂಡ ಭಾಗಿಯಾಗಿ ಸಹಕರಿಸಿತು. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಿ ಅರವು ಮೂಡಿಸುತ್ತಿರುವ ನವ ಚೇತನ ಟ್ರಸ್ಟ್ ಕಳೆದ ಮೂರು ದಿನಗಳಿಂದ ಶೃಂಗೇರಿ ತಾಲೂಕಿನ ಹಲವು ಸರ್ಕಾರಿ ಶಾಲೆಗಳು ಸೇರಿದಂತೆ ಹರಿಹರಪುರ,ಭಂಡಿಗಢಿ ಭಾಗದ ಶಾಲೆಗಳಲ್ಲಿ ಟ್ರಸ್ಟ್ನ ಮುಖ್ಯಸ್ಥರಾದ ಮಂಜುನಾಥ್ ಮತ್ತವರ ತಂಡದ ವತಿಯಿಂದ ನೋಟ್ ಬುಕ್ ವಿತರಿಸಲಾಯಿತು. ಶೃಂಗೇರಿಯ ಸರ್ಕಾರಿ ಫ್ರೌಢಶಾಲೆ (ಗುಡ್ಡದ ಹಸ್ಕೂಲ್) ಹಾಗೂ ವೈಕುಂಠಪುರ ಫ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಮುಖ್ಯಸ್ಥರಾದ ಮಂಜುನಾಥ್ರವರ ಜೊತೆಯಲ್ಲಿ ಪಕ್ಕದ ರಾಜ್ಯ ತಮಿಳುನಾಡಿನ ಪದ್ಮಶ್ರೀ ಪುರಸ್ಕೃತರಾದ ಶ್ರೀ ವಿ.ಕೆ ಮುನಿಸ್ವಾಮಿಯವರು ಹಾಜರಿದ್ದರು. ಶಾಲೆಯ ಪರವಾಗಿ ಮುನಿಸ್ವಾಮಿಯವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಗೆ ಹಿತವಚನವನ್ನು ಹೇಳಿದ ಇಬ್ಬರೂ ಶೃಂಗೇರಿ ಸಹಾಯ ಹಸ್ತ ತಂಡದ ಕಾರ್ಯವನ್ನು ಪ್ರಶಂಸಿಸಿದರು. ಶೃಂಗೇರಿ ಸಹಾಯ ಹಸ್ತ ತಂಡದ ಸಚಿನ್ ಗುಬ್ಬಗೋಡು ತಂಡ ಹೇಗೆ ಕಾರ್ಯನಿರ್ವಹಿಸಿ ಬಡಕುಟಂಬಗಳಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ತಂಡದ ಪ್ರಮುಖರಾದ ಪ್ರಶಾಂತ್,ಪ್ರವೀಣ್,ಸಚಿನ್ ಗುಬ್ಬಗೋಡು,ನಾಗೇಂದ್ರ, ರೇವಂತ್ ನಾಯ್ಕ್,ಜೋಯಲ್,ಸುಜಾತ ಶೆಟ್ಟಿ,ಪ್ರವೀಣ್,ಅರುಣ್,ಕಿರಣ್ ಆನೆಗುಂದ ಮುಂತಾದವರು ಉಪಸ್ಥಿತರಿದ್ದರು.