ಎನ್.ಆರ್ ಪುರ: ಕುಮಾರಸ್ವಾಮಿ ಜನ್ಮದಿನ ಆಚರಿಸಿದ ಕಾರ್ಯಕರ್ತರು..!
– ಜೆಡಿಎಸ್ ಕಛೇರಿಯಲ್ಲಿ ಆಚರಣೆ,ಸಿಹಿ ಹಂಚಿಕೆ
– ನೆಚ್ಚಿನ ನಾಯಕನಿಗೆ ಕಾರ್ಯಕರ್ತರಿಂದ ಶುಭಹಾರೈಕೆ
NAMMUR EXPRESS NEWS
ಎನ್.ಆರ್.ಪುರ: ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಬೃಹತ್ ಉಕ್ಕು ಮತ್ತು ಕೈಗಾರಿಕೆ ಸಚಿವರಾದ ಎಚ್.ಡಿ ಕುಮಾರಸ್ವಾಮಿಯವರ ಜನ್ಮದಿನವನ್ನು ಕೇಕ್ ಕತ್ತರಿಸಿ,ಸಿಹಿ ಹಂಚುವುದರ ಮೂಲಕ ಜೆಡಿಸ್ ಕಾರ್ಯಕರ್ತರು,ಅಭಿಮಾನಿಗಳು ಆಚರಿಸಿದರು. ತಾಲೂಕಿನ ಜೆಡಿಎಸ್ ಕಛೇರಿಯಲ್ಲಿಕೇಕ್ ಕತ್ತರಿಸಿ,ಸಿಹಿ ಹಂಚುವ ಮೂಲಕ ಆಚರಿಸಿ ತಮ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸಿದರು. ಎನ್.ಆರ್.ಪುರ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಚಂದ್ರಶೇಖರ್ ಸೇರಿದಂತೆ ಬಿ.ಟಿ ರವಿ, ಸುಭಾನ್, ಸತೀಶ್,ಇ. ಸಿ ಸೇವಿಯರ್, ಉಪೇಂದ್ರ,ಹೂವಪ್ಪ, ಕೆ.ಟಿ ಚಂದ್ರಶೇಖರ್,ವಿಜಯನ್ ತಂಗಚ್ಚನ್, ನವೀನ,ಪಿಕಪ್ ಚಂದ್ರು ಪರ್ವೀಜ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.