ಅರಣ್ಯ ಒತ್ತುವರಿ ತೆರವು ವಿರೋಧ: ಸಭೆ
– ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಬಾಳೆಹೊನ್ನೂರಲ್ಲಿ ಮಹತ್ವದ ಸಭೆ.
NAMMUR EXPRESS NEWS
ಬಾಳೆಹೊನ್ನೂರು: ಅರಣ್ಯ ಒತ್ತುವರಿ ತೆರವನ್ನು ವಿರೋಧಿಸಿ ಮಲೆನಾಡು-ಕರಾವಳಿ ಜನಪರ ಒಕ್ಕೂಟದಿಂದ ಇದೇ ಸೆಪ್ಟೆಂಬರ್ 01ಕ್ಕೆ ಮಹತ್ವದ ಸಭೆ ಕರೆದಿದೆ.
1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಾಹಾಭಗವತ್ಪಾಂದಗಳವರ ಸಲಹೆ, ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ, ಅರಣ್ಯ ಒತ್ತುವರಿ ತೆರವಿನಿಂದ ಮಲೆನಾಡಿಗರ ಬದುಕು ಮುಂದೇನು,? ಕಾನೂನಾತ್ಮಕ ಪರಿಹಾರಗಳೇನು? ಎಂಬುದರ ಕುರಿತು ಮಲೆನಾಡಿಗರ ಮಹತ್ವದ ಸಭೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಮಠದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸೆಪ್ಟೆಂಬರ್ 01 ಭಾನುವಾರದಂದು ಕರೆಯಲಾಗಿದ್ದು, ವಿಶೇಷ ಆಹ್ವಾನಿತರಾಗಿ ನ್ಯಾಯವಾದಿಗಳು ಹಾಗೂ ಜನಪರ ಹೋರಾಟಗಾರರಾದ ರವೀಂದ್ರನಾಥ್ ನಾಯಕ್ ಆಗಮಿಸಲಿದ್ದಾರೆ ಎಂದು ಮಲೆನಾಡು ಕರಾವಳಿ ಒಕ್ಕೂಟದ ಪ್ರಧಾನ ಸಂಚಾಲಕರಾದ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.