ಕೊಪ್ಪಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ
– ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಪರಿಶೀಲನೆ
– ಶಾಸಕ ರಾಜೇಗೌಡ, ಅಧಿಕಾರಿಗಳಿಂದ ಹಾನಿ ಬಗ್ಗೆ ಮಾಹಿತಿ
NAMMUR EXPRESS NEWS
ಕೊಪ್ಪ: ಮಳೆ ಅಬ್ಬರಕ್ಕೆ ಈ ವರ್ಷ ಅತೀ ಹೆಚ್ಚು ನಷ್ಟವಾದ ತಾಲೂಕಿನ ಪೈಕಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಕೂಡ ಒಂದು. ಇದೀಗ ಕೊಪ್ಪ ತಾಲೂಕಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೆಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೂ ಕುಸಿತದಿಂದ ಹಾನಿಕೊಂಡಿರುವ ಕೊಪ್ಪ-ಜಯಪುರ ಮುಖ್ಯರಸ್ತೆಯಲ್ಲಿ ಅವರು ಪರಿಶೀಲನೆ ಮಾಡಿದರು.
ಕೊಪ್ಪ ತಾಲೂಕಿನ ಜಯಪುರ-ಕೊಪ್ಪ ಮುಖ್ಯ ರಸ್ತೆ ಕುಂಚೂರು ಘಾಟಿಯ ಬಳಿ ವಿಪರೀತ ಮಳೆಗೆ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಕೆ.ಆರ್.ಇ.ಡಿ.ಎಲ್ ಅಧ್ಯಕ್ಷರು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು,ಕೊಪ್ಪ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಕೊಪ್ಪ ಬ್ಲಾಕ್ ಕಾಂಗ್ರೆಸ್ನ ಪ್ರಮುಖರು ಉಪಸ್ಥಿತರಿದ್ದರು.