ಸ್ತೋತ್ರ ತ್ರಿವೇಣಿಯ ಸಮರ್ಪಣೆಗೆ ಸಜ್ಜಾದ ಶೃಂಗೇರಿ..!
– ಸ್ತೋತ್ರ ಸಮರ್ಪಣೆಗೆ ಹರಿದು ಬರುತ್ತಿದೆ ಭಕ್ತಸಾಗರ
– ಜಗದ್ಗುರು ಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾದರ ಸ್ವರ್ಣ ಸಂಭ್ರಮ
NAMMUR EXPRESS NEWS
ಶೃಂಗೇರಿ: ಜಗದ್ಗುರು ಶ್ರೀಶ್ರೀಭಾರತಿ ತೀರ್ಥ ಮಹಾಸ್ವಾಮಿಗಳವರ ಸನ್ಯಾಸ ಸ್ವೀಕಾರದ ಸ್ವರ್ಣ ಮಹೋತ್ಸವದ ಅಂಗವಾಗಿ ಶೃಂಗೇರಿಯಲ್ಲಿ ಏರ್ಪಡಿಸಿರುವ ತ್ರಿವೇಣಿ ಸ್ತೋತ್ರ ಮಹಾ ಸಮರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸುತ್ತಿದ್ದು, ಸ್ತೋತ್ರ ಸಮರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 50000 ಕ್ಕೂ ಅಧಿಕ ಭಕ್ತಾಧಿಗಳು ಸೇರುವ ನಿರೀಕ್ಷೆಯಿದ್ದು ಏಕ ಸ್ವರದಲ್ಲಿ ಜಗದ್ಗುರುಗಳ ಎದುರು ಸ್ತೋತ್ರ ಸಮರ್ಪಣೆ ನಡೆಯಲಿದೆ. ಮಹಿಳೆಯರು,ಪುರುಷರು,ಶಾಲಾ ವಿದ್ಯಾರ್ಥಿಗಳಾದಿಯಾಗಿ ಎಲ್ಲರೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಸ್ತೋತ್ರ ಸಮರ್ಪಣೆಯ ನಂತರ ಜಗದ್ಗುರುಗಳ ಅನುಗ್ರಹ ಭಾಷಣ ನಡೆಯಲಿದೆ. ಎಲ್ಲಾ ಪೂರ್ವಸಿದ್ಧತೆಗಳು ನಡೆದಿದ್ದು, ವಿವಿಧ ವಿಭಾಗಗಳಲ್ಲಿ ಸುಮಾರು 2500 ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.