ಶೃಂಗೇರಿಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ
– ಅಭಿನಯ ಲಹರಿ ನೃತ್ಯೋತ್ಸವಂ 2024
— ಆಗಸ್ಟ್ 24 ಮತ್ತು 25 ರಂದು ಕಾರ್ಯಕ್ರಮ: ಸರ್ವರಿಗೂ ಸ್ವಾಗತ
NAMMUR EXPRESS NEWS
ಬಿಜಿಎಸ್ ನೃತ್ಯ,ನಾಟಕ, ಸಂಗೀತ ತರಬೇತಿ ಶಾಲೆ.ಶೃಂಗೇರಿ ಇವರ ಸಹಯೋಗದೊಂದಿಗೆ, ನಾಟ್ಯ ಲಲಿತಕಲಾ ಟ್ರಸ್ಟ್ (ರಿ), ನಾಟ್ಯ ವೈಭವ ನ್ಯತ್ಯ ಅಕಾಡೆಮಿ ಶೃಂಗೇರಿ ಅರ್ಪಿಸುತ್ತಿರುವ ರಾಜ್ಯ ಮಟ್ಟದ ಅಭಿನಯ ಲಹರಿ ನೃತ್ಯೋತ್ಸವಂ 2024 ಆ.24 ಹಾಗೂ ಆ.25ರಂದು ನಡೆಯಲಿದೆ.
ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಶೃಂಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಇವರ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಗುಣನಾಥ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೃಂಗೇರಿಯ ಶಾಸಕರಾದ ಟಿ ಡಿ ರಾಜೇಗೌಡರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯ ನಿರ್ದೇಶಕರಾದ ರಮೇಶ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೌರಮ್ಮ ತಹಸಲ್ದಾರ್. ಶೃಂಗೇರಿ ತಾಲ್ಲೂಕು., ಶ್ರೀ ಪ್ರವೀಣ್ ಪೂಜಾರಿ. ಅಧ್ಯಕ್ಷರು, ವಿದ್ಯಾರಣ್ಯಪುರ ಗ್ರಾಮಪಂಚಾಯಿತಿ. ಶೃಂಗೇರಿ, ಶ್ರೀ ಪುನೀತ್ ಧರ್ಮದರ್ಶಿಗಳು ಶ್ರೀ ಕ್ಷೇತ್ರ ಮುಳ್ಳುಗುಡ್ಡೆ,ಶ್ರೀ ನಾಗೇಶ್ ಕೆ.ಸಿ. ಸಿಇಓ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್. ಚಿಕ್ಕಮಗಳೂರು ಮತ್ತು ಅಧ್ಯಕ್ಷರು, ರೋಟರಿ ಸಂಸ್ಥೆ. ಶೃಂಗೇರಿ ರವರು ಭಾಗವಹಿಸುತ್ತಾರೆ.
ದಿನಾಂಕ :- 25/08/24 ರಂದು ಬೆಳಿಗ್ಗೆ 9-00 ಗಂಟೆಯಿಂದ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ರಾಧ ಕೃಷ್ಣವೇಷ ಸ್ಪರ್ಧೆ,
ನಂತರ ಸಂಜೆ 6-00 ಗಂಟೆಗೆ ಜೆಸಿಐ, ಶೃಂಗೇರಿ ವತಿಯಿಂದ ಹಾಸ್ಯ ಕಲಾವಿದ ಮನು ಹಂದಾಡಿಯವರಿಂದ ಹಾಸ್ಯ ಕಾರ್ಯಕ್ರಮ
ನಂತರ ಸಂಜೆ 7-00 ಗಂಟೆಯಿಂದ ನಾಟ್ಯ ವೈಭವ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳಿಂದ ಅಭಿನಯ ಲಹರಿ ಕಾರ್ಯಕ್ರಮ ನಡೆಯಲಿದೆ.
ಯಾವತ್ತು ಯಾವ ಸ್ಪರ್ಧೆ?
ಶನಿವಾರ ಬೆಳಗ್ಗೆ 9 ಗಂಟೆಗೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಪ್ರಾರಂಭವಾಗುತ್ತದೆ ಹಾಗೂ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಕೃಷ್ಣವೇಷ ಸ್ಪರ್ಧೆ ಮತ್ತು ನಾಟ್ಯ ವೈಭವ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳ ಅಭಿನಯ ಲಹರಿ ಕಾರ್ಯಕ್ರಮ ಇರುತ್ತದೆ. Pre K G ಯಿಂದ ಎರಡನೇ ತರಗತಿವರೆಗೆ, ಮೂರನೇ ತರಗತಿಯಿಂದ 7ನೇ ತರಗತಿಯವರಿಗೆ ಕೃಷ್ಣವೇಷ ಸ್ಪರ್ಧೆ ಭಾನುವಾರ 25ನೇ ತಾರೀಕು ನೆರವೇರಲಿದೆ. 25ನೇ ತಾರೀಕು ಸಂಜೆ 6 ಗಂಟೆಯಿಂದ ಅಭಿನಯ ಲಹರಿ ಕಾರ್ಯಕ್ರಮ ಇರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಚಿಕ್ಕಮಗಳೂರು, ಕನ್ನಡ ಜಾನಪದ ಪರಿಷತ್ ಶೃಂಗೇರಿ, ಶೃಂಗೇರಿ ಸಹಾಯ ಹಸ್ತ ತಂಡ, JCI ಶೃಂಗೇರಿ ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ.
ಶ್ರೀ ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿಯಿಂದ ಸಂಸ್ಕರಣವನ್ನು ನೀಡುತ್ತಿದ್ದಾರೆ. ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ ಕ್ಲಬ್ ಾಗೂ ಲ್ಲಾ ಸಂಘ ಸಂಸ್ಥೆಗಳಿಂದ ಸಹಕಾರವಿದ್ದು ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ರಂಗನ್ನು ಹೆಚ್ಚಿಸಬೇಕು ಎಂದು ಸರ್ವರನ್ನು ಸ್ವಾಗತಿಸುವ ನಾಟ್ಯ ವೈಭವ ನೃತ್ಯ ಅಕಾಡೆಮಿ ನಿರ್ದೇಶಕರು, ವಿದ್ಯಾರ್ಥಿಗಳು ಪೋಷಕ ವೃಂದದವರು.
ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಕೆಳಗಿನ ದೂರವಾಣಿಯನ್ನು 8073233268, 9448716872 ಸಂಪರ್ಕಿಸಬಹುದು.