ಸಿಗಂದೂರು ಚೌಡೇಶ್ವರಿ ದೇವಿ ಜಾತ್ರೋತ್ಸವಕ್ಕೆ ಸಜ್ಜು!
– ಜ.14, 15ರಂದು ಮಕರ ಸಂಕ್ರಮಣ ಜಾತ್ರೋತ್ಸವ
– ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ
ವರದಿ: ಪ್ರಾಪ್ತಿ ಸಾಗರ
NAMMUR EXPRESS NEWS
ಸಾಗರ: ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ಜಾತ್ರೆ ಜನವರಿ 14 ಮತ್ತು 15 ರಂದು ನಡೆಯಲಿದೆ. ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಎರಡು ದಿನಗಳ ಸಂಕ್ರಾಂತಿ ಜಾತ್ರೆಯು ವಿಜೃಂಭಣೆಯಿಂದ ಜನವರಿ 14 ಮತ್ತು 15 ರಂದು ಜಾತ್ರೆಯು ಆರಂಭವಾಗಲಿದ್ದು ಸರ್ವರನ್ನು ದೇವಸ್ಥಾನ ಆಡಳಿತ ಮಂಡಳಿ ಸ್ವಾಗತಿಸಿದೆ.
ದೇವಿಯ ಮೂಲ ಸ್ಥಳವಾದ ಸೀಗೆಕಣಿವೆಯಲ್ಲಿ ವಿವಿಧ ಪೂಜೆ ಹಾಗೂ ಹೋಮಗಳನ್ನ ನೆರವೇರಿಸಲಾಗುತ್ತದೆ. ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಸಿಗಂದೂರು ಆಲಯಶುದ್ದಿಯೊಂದಿಗೆ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಧರ್ಮದರ್ಶಿಗಳು ಡಾ. ರಾಮಪ್ಪನವರ ನೇತೃತ್ವದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸುವವರು. ಚಂಡಿಕಾ ಹೋಮ, ನವಚಂಡಿಕಾ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತದೆ. ಬೆಳಗ್ಗೆ 10 ಗಂಟೆಯ ನಂತರ ದೇವಿಯ ಸನ್ನಿಧಾನದಲ್ಲಿ ಪೂಜೆಗಳು ನೆರವೇರುತ್ತದೆ. ಅಖಂಡ ಜ್ಯೋತಿಯ ಮೂಲಕ ಶ್ರೀದೇವಿಗೆ ವಿಶೇಷ ರಥದ ಮೂಲಕ ಸಿಗಂದೂರಿಗೆ ಆಗಮಿಸುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗುತ್ತದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.