ತೆರವು ಆದೇಶ ವಿರೋಧಿಸಿ ಶೃಂಗೇರಿಯಲ್ಲಿ ಹೋರಾಟ
– ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ
NAMMUR EXPRESS NEWS
ಶೃಂಗೇರಿ: ರಾಜ್ಯ ಸರ್ಕಾರದ ರೈತರ ಒತ್ತುವರಿ ತೆರವು ಆದೇಶ ವಿರೋಧಿಸಿ ಶೃಂಗೇರಿಯಲ್ಲಿ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಸರ್ಕಾರಕ್ಕೆ ಈ ರೈತರ ಒತ್ತುವರಿ ತೆರವು ಆದೇಶವನ್ನು ಹಿಂಪಡೆಯುವಂತೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಅಂಬ್ಲೂರು ರಾಮಕೃಷ್ಣ “2002ರಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಒಂದು ಆದೇಶ ಇವತ್ತು ಮಲೆನಾಡಿಗರಿಗೆ ಬಹಳ ಮಾರಕವಾಗಿ ಪರಿಣಮಿಸಿದೆ. ಮಂಜೂರಾತಿಗೆ ಬೇಕಾಗಿರುವಂತಹ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಈಗ ಅರಣ್ಯ ಇಲಾಖೆ ಆ ಜಾಗವೆಲ್ಲ ನಮ್ಮದೂ ಎಂದು ತೆರವು ಮಾಡಲು ಮುಂದಾಗಿದೆ. ನಾವು ಇದನ್ನು ಕಂಡಿಸುತ್ತಿದ್ದು ಇಲಾಖೆ ಅಗತ್ಯರುವ ಜಾಗಗಳು,ಕೃಷಿ ಭೂಮಿಯನ್ನು ಇತ್ಯರ್ಥವಾಗದ ಹೊರತು ತೆರವು ಮಾಡ ಕೂಡದು. ಮೊದಲೇ ಹೇಳಿದಂತೆ 10 ಸಾವಿರ ಹೆಕ್ಟೇರ್ ವಾಪಾಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಇದರ ನಂತರ ಜಂಟಿ ಸರ್ವೇ,ಕೃಷಿ ಹಾಗೂ ಕೃಷಿಯೇತರ ಭೂಮಿ ಎಂದು ವರ್ಗೀಕರಿಸಲು ಸಹಕಾರಿಯಾಗುತ್ತದೆ. ಅದನ್ನ ಬಿಟ್ಟು ಕೇವಲ ತೋರಿಕೆಗೆ ಜಂಟಿ ಸರ್ವೇ ಮಡುವುದು,ಕಂದಾಯ ಭೂಮಿ ಎಲ್ಲಿದೆ ಎಂಬ ಅರಿವಿಲ್ಲದಂತಹ ಸ್ಥಿತಿಯಲ್ಲಿಂದು ಕಂದಾಯ ಇಲಾಖೆ ಇದ್ದು ಇಂತಹ ಘಟನೆ ಶೃಂಗೇರಿಯಲ್ಲೇ ನಡೆದಿದೆ ಹಾಗಾಗಿ ಸುಮ್ಮನೆ ಜಂಟಿ ಸರ್ವೆಯ ನೆಪ ಹೇಳುತ್ತಾ ಕಾಲಹರಣ ಮಾಡದೇ ಕೂಡಲೇ ಆದೇಶ ಹಿಂಪಡೆದು,ವಸತಿ ರಹಿತರಿಗೆ ಜಾಗ ಕೂಡಲೇ ಮಂಜೂರಾತಿಯಾಗಬೇಕು ಎಂದು ಒತ್ತಾಯಿಸಿದರು.