ತಾಲೂಕು ಕಛೇರಿ ಸರ್ವೇ ಇಲಾಖೆಗೆ ಕರೆಂಟ್ ಇಲ್ಲ..!!?
– ಕರೆಂಟ್ ಬಿಲ್ ಕಟ್ಟಿಲ್ಲ,ಬಿಲ್ ಕಟ್ಟೋವರೆಗು ಕರೆಂಟ್ ಇಲ್ಲ
– ಕೆಲಸಗಳಾಗದೇ ಸಾರ್ವಜನಿಕರ ಪರದಾಟ, ಇಲಾಖೆ ವಿರುದ್ಧ ಆಕ್ರೋಶ
NAMMUR EXPRESS NEWS
ಕೊಪ್ಪ: ತಾಲೂಕು ಕಚೇರಿಯ ಸರ್ವೇ ಇಲಾಖೆಯಲ್ಲಿ (ಭೂಮಾಪನ ಇಲಾಖೆ ಕಳೆದ 15 ದಿನಗಳಿಂದ ಕರೆಂಟ್ ಇಲ್ಲದೆ ಕೆಲಸಗಳಾಗದೇ ಸಾರ್ವಜನಿಕರು ದಿನನಿತ್ಯ ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಯೊಬ್ಬರನ್ನು ವಿಚಾರಿಸಿದಾಗ ವಿದ್ಯುತ್ಶಬಿಲ್ ಬಾಕಿಯಿದ್ದು ಅದು ಪಾವತಿಯಾಗುವರೆಗೂ ಮೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಎಂಬ ವಿಷಯ ಗೊತ್ತಾಗಿದೆ. ಈಗ ಪ್ರತಿಯೊಂದು ಕೆಲಸವು ಆನ್ಲೈನ್ ವ್ಯವಸ್ಥೆ ಆಗಿದ್ದು ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿದೆ.ಇದರಿಂದ ಸಾರ್ವಜನಿಕರ ಸಂಭಂಧಪಟ್ಟ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಈ ಸಮಸ್ಯೆ ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಸೇವೆ ಒದಗಿಸಲು ಮನವಿ ಮಾಡಿದ್ದಾರೆ.