ಟಾಪ್ 3 ನ್ಯೂಸ್ ಮಲ್ನಾಡ್
ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಬೈಕ್ ಪಲ್ಟಿ
– ಹೊಸನಗರ : ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ
– ಸಾಗರ: ಶರಾವತಿ ಹಿನ್ನೀರಿನಲ್ಲಿ ಯುವಕನ ಶವ ಪತ್ತೆ
NAMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಎದೆ ಝಲ್ ಅನಿಸುವ ಡೆಡ್ಲಿ ಆಕ್ಸಿಡೆಂಟ್ ನಡೆದಿದ್ದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರೇಸ್ಗೆ ಇಳಿದವರಂತೆ ಎರಡು ದ್ವಿಚಕ್ರ ವಾಹನಗಳೂ ವೇಗವಾಗಿ ಬಂದಿದ್ದು ಅದರಲ್ಲಿ ಒಂದು ಬೈಕ್ ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ರೋಡ್ ಎಡ್ಜ್ ಗೆ ಬಂದು ಓವರ್ ಟೇಕ್ ಮಾಡಲು ಯತ್ನಿಸುವಾಗ ಆಯಾತಪ್ಪಿ 4 ಬಾರಿ ಬೈಕ್ ಪಲ್ಟಿ ಹೊಡೆದಿದೆ.
ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ಕು ಬಾರಿ ಬೈಕ್ ಪಲ್ಟಿಯಾಗಿ, ಚಾಲಕ ಹಾರಿ ಬಿದ್ದಿದ್ದಾನೆ. ಪವಾಡ ಸದೃಶದ ರೀತಿ ಚಾಲಕ ಎದ್ದು ನಿಂತಿದ್ದು ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಿಕ್ಕಮಗರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
– ಹೊಸನಗರ : ಬಿಸಿಯೂಟ ಕೊಠಡಿಯಲ್ಲಿ ಕಾಳಿಂಗ ಸರ್ಪ
ಹೊಸನಗರ : ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ತನ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ ಸರ್ಪವನ್ನು ಸೋಮವಾರ ಆಗುಂಬೆ ಮಳೆ ಕಾಡು ಸಂಶೋಧನ ಕೇಂದ್ರದ ಉರಗ ತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಕೈ ಬಿಟ್ಟರು. ಸೋಮವಾರ ಬೆಳಿಗ್ಗೆ ಅಡುಗೆ ಸಹಾಯಕಿ ಪ್ರೇಮ, ಅಕ್ಕಿ ಬೇಳೆಗಾಗಿ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಕಾಣಿಸಿಕೊಂಡಿದೆ. ಮಕ್ಕಳು ಕೂಡ ಶಾಲೆಗೆ ಆಗಮಿಸಿದ್ದರು. ತರಗತಿ ಕೊಠಡಿ ನಡುವೆ ಅಂತರವಿರುವ ಕಾರಣ.. ಮಕ್ಕಳು ಬಿಸಿಯೂಟದ ಕೊಠಡಿಯ ಹತ್ತಿರ ಸುಳಿದಿರಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಶಿಕ್ಷಕ ಸುಪ್ರಿತ್ ಡಿಸೋಜ ಕೊಠಡಿಯ ಬಾಗಿಲು ಹಾಕಿ ಹಾವನ್ನು ಬಂಧಿ ಮಾಡಿದರು. ನಂತರ ಪೋಷಕರಿಗೆ ಸುದ್ದಿ ಮುಟ್ಟಿಸಿದರು ಬಳಿಕ ಅರಣ್ಯ ಇಲಾಖೆಯ ಮೂಲಕ ಅಜಯಗಿರಿಯನ್ನು ಸಂಪರ್ಕಿಸಲಾಯಿತು. ಕಾಳಿಂಗ ಸರ್ಪ ಒಳಗಡೆ ಸೇರಿಕೊಂಡಿರಬೇಕು. ಹೊರಗೆ ಹೋಗಲು ಅವಕಾಶವಿಲ್ಲದೇ ಅಲ್ಲೇ ಉಳಿಯುವಂತಾಗಿತ್ತು ಎನ್ನುತ್ತಾರೆ. ಕಾಳಿಂಗ ಸರ್ಪವನ್ನು ಸೆರೆ ಹಿಡಿದ ನಂತರ ಮಕ್ಕಳು ಮತ್ತು ಪೋಷಕರಿಗೆ ಅಜಯಗಿರಿ, ಕಾಳಿಂಗ ಸರ್ಪ ಕಂಡುಬಂದಾಗ ಮುಂಜಾಗ್ರತಾ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡರ್ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಜರಿದ್ದರು.
– ಸಾಗರ: ಶರಾವತಿ ಹಿನ್ನೀರಿನಲ್ಲಿ ಯುವಕನ ಶವ ಪತ್ತೆ
ಸಾಗರ : ತಾಲ್ಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕನೊಬ್ಬಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ಯುವಕನಾಗಿದ್ದಾನೆ. ಜಡ್ಡಿನಬೈಲು ಶರಾವತಿ ಹಿನ್ನೀರಿನಲ್ಲಿ ಮೀನುಗಾರ ರವಿ ಎಂಬುವವರು ಸೋಮವಾರ ಸಂಜೆ ಮೀನಿಗಾಗಿ ಬಲೆ ಹಾಿ ಬಂದದ್ದರು. ಮಂಗಳವಾರ ಬೆಳಿಗ್ಗೆ ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ವಿಪರೀತ ಮಳೆಯಿಂದಾಗಿ ಶರಾವತಿ ಹಿನ್ನೀರಿನಲ್ಲಿ ರಭಸ ಹೆಚ್ಚಿದ್ದು, ಜೊತೆಗೆ ಮರಮಟ್ಟಿ ವಿಪರೀತವಾಗಿದೆ.
ಮರಮುಟ್ಟುಗಳಿಗೆ ಬಲೆ ಸಿಕ್ಕಿದ್ದನ್ನು ರವಿ ಬಿಡಿಸಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.