ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್..!
* ಶೃಂಗೇರಿಯಿಂದ ದರ್ಶನ ಮುಗಿಸಿ ಹೊರನಾಡಿಗೆ ಹೊರಟಿದ್ದ ಪ್ರವಾಸಿಗರು
* ಸರಿಯಾದ ಸೂಚನಾಫಲಕ ಇಲ್ಲದಿರುವುದೇ ಅಪಘಾತಕ್ಕೆ ಕಾರಣ
NAMMUR EXPRESS NEWS
ಕೊಪ್ಪ: ಬೆಂಗಳೂರು ಮೂಲದ ಪ್ರವಾಸಿಗರು ಶೃಂಗೇರಿ ಶ್ರೀ ಶಾರದಾಂಬೆ ದರ್ಶನ ಮುಗಿಸಿ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದರ್ಶನಕ್ಕೆ ಹೋಗುವಾಗ ಪ್ರಯಾಣಿಕರಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ತಾಲೂಕಿನ ಅಗಳಗಂಡಿ ಗ್ರಾಮದ ಬೆಳವಿನ ಕುಂಬ್ರಿ ಎಂಬಲ್ಲಿ ನಡೆದಿದೆ.
ಬಸ್ನಲ್ಲಿ 16 ಜನ ಪ್ರಯಾಣಿಸುತ್ತಿದ್ದು ರಸ್ತೆಯಲ್ಲಿ ಸೂಕ್ತ ಸೂಚನಾಫಲಕ ಇಲ್ಲದಿರುವುದೇ ಈ ಅಪಘಾತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ದಿನ ನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಸರಿಯಾದ ಸೂಚನಾಫಲಕಗಳನ್ನು ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.