ಚಿಕ್ಕಮಗಳೂರಿನ ನಗರಸಭೆಯಲ್ಲಿ ಅರಳಿದ ‘ಕಮಲ’.!
– ನೂತನ ಅಧ್ಯಕ್ಷರಾಗಿ ಸುಜಾತ ಶಿವಕುಮಾರ್, ನೂತನ ಉಪಾಧ್ಯಕ್ಷರಾಗಿ ಅನು ಮಧುಕರ್
– 35 ಸದಸ್ಯಬಲ ಹೊಂದಿದ ನಗರಸಭೆಯಲ್ಲಿ ಬಿಜೆಪಿ 25 ಸದಸ್ಯರ ಮತ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ.
ನೂತನ ಅಧ್ಯಕ್ಷರಾಗಿ ಸುಜಾತ ಶಿವಕುಮಾರ್ ಹಾಗೂ ನೂತನ ಉಪಾಧ್ಯಕ್ಷರಾಗಿ ಅನು ಮಧುಕರ್ ಆಯ್ಕೆಯಾಗಿದ್ದಾರೆ. ಆ ಮೂಲಕ 35 ಸದಸ್ಯಬಲ ಹೊಂದಿದ ನಗರಸಭೆಯಲ್ಲಿ ಬಿಜೆಪಿ 25 ಸದಸ್ಯರ ಮತ ಪಡೆಯುವುದರ ಮೂಲಕ ನಗರ ಸಭೆಯ ಆಡಳಿತವನ್ನು ಹಿಡಿದಿದೆ. ಆಯ್ಕೆಯಾದ ನೂತನ ಅಧ್ಯಕ್ಷರು ಉಪಾಧ್ಯಕ್ಷರಿಗೆ ಜಿಲ್ಲೆಯ ಬಿಜೆಪಿ ನಾಯಕರು,ಪ್ರಮುಖರು, ಕಾರ್ಯಕರ್ತರು ಶುಭಕೋರಿದ್ದಾರೆ. ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸೇರಿದಂತೆ ಜಿಲ್ಲೆಯ ಬಿಜೆಪಿ ಅಧ್ಯಕ್ಷರು, ನಾಯಕರು,ಪ್ರಮುಖರು, ಕಾರ್ಯಕರ್ತರು ಶುಭಕೋರಿದ್ದಾರೆ.