ಶಾಸಕರ ವಿರುದ್ಧ ತಿರುಗಿಬಿದ್ದ ಜನ!
– ಶೃಂಗೇರಿಯ ಮರ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ
– ಸಭೆಗೆ ತಡವಾಗಿ ಬಂದ ಶಾಸಕರ ವಿರುದ್ಧ ಸ್ಥಳೀಯರ ಸಿಟ್ಟು
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಭಾಗವಹಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಗ್ರಾಮಗಳ ರಸ್ತೆಸಮಸ್ಯೆ,ಅಂಗವಿಕಲರ ಯುಡಿಐಡಿ ಕಾರ್ಡ್, ರೈತರ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ವಿವರಿಸಿ,ಅರ್ಜಿಗಳನ್ನು ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸೋದಾಗಿ ಭರವಸೆ ನೀಡಿದರು. ಸಭೆಗೆ ತಡವಾಗಿ ಬಂದ ಶಾಸಕರು ತರಾತುರಿಯಲ್ಲಿ ಸಮಸ್ಯೆ ಕೇಳಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಲು ಹೇಳಿ ಪರಿಹಾರ ಮಾಡೋದಾಗಿ ಹೇಳಿದರು. ಶಾಸಕರ ಈ ತರಾತುರಿಯ ಜನ ಸಂಪರ್ಕ ಸಭೆಯ ಬಗ್ಗೆ ಮರ್ಕಲ್ ಗ್ರಾಪಂ ಭಾಗದ ಸಾರ್ವಜನಿಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.ಸಭೆಯಲ್ಲಿ ತಹಶೀಲ್ದಾರರಾದ ಗೌರಮ್ಮ, ತಾಲೂಕು ಪಂಚಾಯ್ತಿ ಇಓ ಸುದೀಪ್,ಗ್ರಾಪಂ ಅಧ್ಯಕ್ಷರಾದ ಮಹೇಶ್,ಉಪಾಧ್ಯಕ್ಷರಾದ ಸುಮನ ಹಾಗೂ ಪಂಚಾಯ್ತಿ ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.