ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್ ಹರಿದರೇ ಕಿಡಿಗೇಡಿಗಳು!
– ವಿಶ್ವಹಿಂದೂ ಪರಿಷದ್, ಬಜರಂಗದಳ ಆಯೊಜಿಸಿ ಹಾಕಿದ್ದ ಬ್ಯಾನರ್
– ಕಿಡಿಗೇಡಿಗಳನ್ನು ಬಂಧಿಸುವಂತೆ ಸಂಘಟನೆಗಳ ಪಟ್ಟು
NAMMUR EXPRESSS NEWS
ಕೊಪ್ಪ: ಕೊಪ್ಪ ಪಟ್ಟಣದ ದೇವೇಗೌಡ ವೃತ್ತದಲ್ಲಿ ಹಾಕಿದ್ದ ಮೊಸರು ಕುಡಿಕೆ ಕಾರ್ಯಕ್ರಮದ ಬ್ಯಾನರ್ನ್ನು ಕಿಡಿಗೇಡಿಗಳು ಹರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯಕ್ಕೆ ವಿಶ್ವಹಿಂದೂ ಪರಿಷದ್,ಬಜರಂಗದಳ ಆಕ್ರೋಶಗೊಂಡಿದ್ದು ಪೋಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಪ್ಪ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸೆ.22 ನೇ ತಾರೀಖಿನಂದು ಕೊಪ್ಪದ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ವಿಶ್ವ ಹಿಂದೂ ಪರಿಷದ್,ಬಜರಂಗದಳವು ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಸ್ಪರ್ಧೆ ಆಯೋಜಿಸಿ ಜಾಹೀರಾತು ಬ್ಯಾನರ್ ಅಳವಡಿಸಿತ್ತು.
ಉದ್ದಪೂರ್ವಕವಾಗಿ ಹರಿದರೇ?: ್ಯಾನರ್ ಉದ್ದೇಶಪೂರ್ವಕವಾಗಿ ಹರಿಯಲಾಗಿದೆಯೇ ಅಥವಾ ಆಕಸ್ಮಿಕವೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.