ಮಲೆನಾಡಲ್ಲಿ ಸುಧಾಕರ್ ಶೆಟ್ಟಿ ಅವರಿಂದ ಉದ್ಯೋಗ ಪರ್ವ!
– 250ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಅವಕಾಶ
– ಅಮ್ಮ ಫೌಂಡೇಶನ್ ಮೂಲಕ ಕೊಪ್ಪದಲ್ಲಿ ನೂತನ ಗಾರ್ಮೆಂಟ್ಸ್
NAMMUR EXPRESS NEWS
ಕೊಪ್ಪ: ಮಲೆನಾಡಿನ ಮಹಿಳೆಯರ ಸ್ವಾವಲಂಬನೆಗೆ ಅಮ್ಮ ಫೌಂಡೇಶನ್ ಸಂಸ್ಥಾಪಕರಾದ ಸುಧಾಕರ್ ಎಸ್ ಶೆಟ್ಟಿ ತುಮಖಾನೆ ಅವರ ಕನಸಿನ ಯೋಜನೆ ಆರಂಭ ಮಾಡಲು ಮುಂದಾಗಿದ್ದಾರೆ. ಮಲೆನಾಡಿನ ಮಹಿಳೆಯರ ಸ್ವಾವಲಂಬನೆಗೆ ಇನ್ನಷ್ಟು ಶಕ್ತಿ ನೀಡಲು ಕೊಪ್ಪ ನಗರದ, ಟಿ.ಎಮ್ ರಸ್ತೆಯಲ್ಲಿ .” ತುಮಖಾನೆ ಸಂಜೀವ ಶೆಟ್ಟಿ ಗಾರ್ಮೆಂಟ್ಸ್” ನೂತನವಾಗಿ ಆರಂಭಗೊಳ್ಳಲಿದೆ.
ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶ ನೀಡುವ ಈ ಯೋಜನೆಯಲ್ಲಿ ಮೊದಲ ಹಂತದಲ್ಲಿ 250 ಉದ್ಯೋಗಿಗಳಿಗೆ ಉದ್ಯೋಗವಕಾಶವಿದ್ದು ನುರಿತ ಅಧಿಕಾರಿಗಳು, ಆಸಕ್ತ ೈಲ್ಗಳು ಬೇಕಾಗಿದ್ದಾರೆ. ಯಾವುದೇ ಅನುಭವ ಇಲ್ಲದಿದ್ದಲ್ಲಿ ತರಬೇತಿ ನೀಡಿ ಕೆಲಸ ನೀಡಲಾಗುವುದು. ಆಸಕ್ತಿ ಇರುವ ಪ್ರತಿಯೊಬ್ಬ ಮಹಿಳೆಯರು ಕೊಪ್ಪದ ಬಾಳಗಡಿಯ ತಾಲೂಕು ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿರುವ ಆಫೀಸಿಗೆ ಖುದ್ದಾಗಿ ಭೇಟಿ ನೀಡಿ ನಿಮ್ಮ ಮಾಹಿತಿಯನ್ನು ತಿಳಿಸಿ. ಶೀಘ್ರದಲ್ಲಿ ಗಾರ್ಮೆಂಟ್ಸ್ ಶುರುವಾಗಲಿದೆ.
ಶಿಕ್ಷಣ ಬಳಿಕ ಈಗ ಉದ್ಯೋಗ ಕ್ಷೇತ್ರದಲ್ಲಿ ಸೇವೆ
ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರಾಗಿ ಮನೆ ಮನೆಯಲ್ಲೂ ಪರಿಚಿತರಾಗಿರುವ ಸುಧಾಕರ್ ಶೆಟ್ಟಿ ಅವರು ಮೈಸೂರಲ್ಲಿ ತಮ್ಮದೇ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಇದೀಗ ಗಾರ್ಮೆಂಟ್ಸ್ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.