ಚಪಾತಿಗೆ ನಿದ್ದೆ ಮಾತ್ರೆ ಬೆರೆಸಿ ಗಂಡನ ಕೊಂದ ಹೆಂಡ್ತಿ!
– ಪ್ರಿಯಕರನ ಜತೆ ಲವ್ವಿಡವ್ವಿಗೆ ಪತಿಯ ಕೊಲೆ
– ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ನಡೆದ ಘಟನೆ
– ಮೂಡಿಗೆರೆಯಲ್ಲಿ ಆಸ್ತಿ ಹಣಕ್ಕಾಗಿ ತಂದೆ ಕೊಂದ ಮಗ
– ತಾಯಿ ಮೇಲೂ ಮಚ್ಚಿನಿಂದ ಹಲ್ಲೆ: ಗಂಭೀರ
NAMMUR EXPRESS NEWS
ಕಡೂರು: ಚಪಾತಿಗೆ ನಿದ್ದೆ ಮಾತ್ರೆ ಬೆರೆಸಿ ಗಂಡನ ಕೊಂದ ಹೆಂಡ್ತಿ. ಪ್ರಿಯಕರನ ಜತೆ ಲವ್ವಿಡವ್ವಿಗೆ ಪತಿಯ ಕೊಲೆ ಮಾಡಿದ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಲ್ಲಿ ನಡೆದಿದೆ. 13 ವರ್ಷದ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿಯ ನಿಜ ಬಣ್ಣ ತನಿಖೆಯಲ್ಲಿ ಬಯಲಾಗಿದ್ದು, ಯಗಟಿ ಪೊಲೀಸರ ಅತಿಥಿಯಾಗಿ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಏನಿದು ಘಟನೆ?:
ಕಡೂರು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತ ಇಬ್ಬರು ಆರೋಪಿಗಳಾಗಿದ್ದು, ಪಾವನಳ ಪತಿ ನವೀನ್ಕುಮಾರ್(28) ಆ.6ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಮೃತದೇಹ ಪತ್ತೆಯಾದ ಹಿನ್ನಲೆಯಲ್ಲಿ ಅನುಮಾನಸ್ಪದವಾಗಿ ಸಾವನ್ನಪಿದ್ದ. ಈ ಬಗ್ಗೆ ಶಂಕೆ ವ್ಯಕ್ತಪಡಿಸಿ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಕ್ರಮ ಸಂಬಂಧದ ಸುಳಿವು ಸಿಕ್ಕ ಹಿನ್ನಲೆಯಲ್ಲಿ ಸಿಪಿಐ ಶಿವಕುಮಾರ್ ಮತ್ತು ಪಿಎಸೈ ರಂಗನಾಥ್ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸಿ ವಾರದೊಳಗೆ ಕೊಲೆಯ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಮಾಡಿದ್ದು ಹೀಗೆ…!
ಕಳೆದ 6 ವರ್ಷಗಳ ಹಿಂದೆ ನವೀನ್ ಕುಮಾರ್ ಜೊತೆ ಪಾವನ ಮದುವೆಯಾಗಿ 4 ವರ್ಷದ ಹೆಣ್ಣು ಮಗುವಿದೆ. ಆದರೆ ಪತ್ನಿ ಪಾವನ ಮತ್ತು ಪ್ರಿಯಕರ ಸಂಜು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ತಮ್ಮ ಪ್ರೀತಿಗೆ ಗಂಡ ನವೀನ್ ಅಡ್ಡಿಯಾಗಿದ್ದರಿಂದ ಪ್ರಿಯಕರನ ಜೊತೆಗೂಡಿ ನಿದ್ದೆಮಾತ್ರೆಯನ್ನು ನೀರಿನಲ್ಲಿ ಕರಗಿಸಿ ಚಪಾತಿ ಹಿಟ್ಟಿಗೆ ಬೆರೆಸಿ ಊಟದ ಬಳಿಕ ನಿದ್ದೆ ಮಂಪರಿಗೆ ಜಾರಿದ ಬಳಿಕ ಸಿನಿಮಿಯ ಶೈಲಿಯಲ್ಲಿ ಪತಿಯನ್ನು ಪ್ರಿಯಕರನ ಬೈಕಿನಲ್ಲಿ ತಂದು ಯಗಟಿ ಸಮೀಪದ ದೊಡ್ಡಗುಂಡಿಯ ಕೆರೆಗೆ ಎಸೆದು ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾರೆ.
ಕೆರೆಯ ಬಳಿ ಪತ್ತೆಯಾದ ಬೈಕ್, ಬ್ಯಾಟರಿ, ಚಪ್ಪಲಿಗಳು ಹಾಗೂ ಮೃತ ನವೀನ್ಕುಮಾರ್ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ನಂತರ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ವರದಿ ಬಂದ ನಂತರ ತನಿಖೆಯ ಕಾರ್ಯಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಬಳಿಕ ಘಟನೆಯ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದರು. ಶನಿವಾರದಂದು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದರು.
ತನಿಖೆಯ ಕಾರ್ಯಚರಣೆಯಲ್ಲಿ ಯಗಟಿಯ ಎಎಸೈ ನಂಜನಾಯ್ಕ, ಸಿಬ್ಬಂದಿಗಳಾದ ಪ್ರದೀಪ್, ಉಮೇಶ್, ಶ್ರೀನಿವಾಸ್, ಯೋಗೀಶ್, ಮಹೇಶ್ವರಪ್ಪ ಇದ್ದರು.
ತಂದೆಯನ್ನೇ ಕೊಂದ ಮಗ, ತಾಯಿ ಆಸ್ಪತ್ರೆಗೆ!
ಆಸ್ತಿ ಮಾರಿ ಬಂದ ಹಣದ ವಿಚಾರಕ್ಕೆ ಗಲಾಟೆ, ತಂದೆ ಹಾಗೂ ಮಧ್ಯವರ್ತಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಆಸ್ತಿ ಮಾರಿ ಬಂದ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು ಇಬ್ಬರ ಕೊಲೆಯಾಗಿದೆ. ಹಣದ ವಿಚಾರಕ್ಕೆ ಮಗ ತನ್ನ ಸ್ವಂತ ತಂದೆ, ತಾಯಿ, ಮಧ್ಯವರ್ತಿ ಸೇರಿ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಂದೆ ಭಾಸ್ಕರ್ ಗೌಡ, ಮಧ್ಯವರ್ತಿ ಕಾರ್ತಿಕ್ ಮೃತಪಟ್ಟಿದ್ದು ತಾಯಿ ಸ್ಥಿತಿ ಗಂಭೀರವಾಗಿದೆ. ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023