ವಿವಾದಿತ ದರ್ಗಾದಲ್ಲಿ ಕಾಮಗಾರಿ ಹಿಂದೂ ಸಂಘಟನೆಗಳ ಆಕ್ರೋಶ..!!
* ನಗರದ ಕೋಟೆಯಲ್ಲಿನ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ
* ಸ್ಥಳದಲ್ಲಿ ಬಿಗುವಿನ ವಾತಾವರಣ,ಪೋಲೀಸರಿಂದ ಬಿಗಿಬಂದೋಬಸ್ಥ್
NAMMUR EXPRESS NEWS
ಚಿಕ್ಕಮಗಳೂರು: ನಗರದ ವಿವಾದಿತ ಕೋಟೆ ದರ್ಗಾದಲ್ಲಿ ಕಾಮಗಾರಿಗೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ನೂರಾರು ಪೋಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಈ ದರ್ಗಾ ನಿರ್ಮಾಣ ಅಕ್ರಮವಾಗಿದ್ದು ದರ್ಗಾ ಕಾಮಗಾರಿ ನಡೆಸದಂತೆ ಸ್ಥಳೀಯರು,ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಈ ವಿವಾದಿತ ಸ್ಥಳದಲ್ಲಿ ಈ ಹಿಂದೆ ಕೂಡ ಹಿಂದೂ ಮುಸ್ಲಿಂ ನಡುವೆ ವಿವಾದ ಸೃಷ್ಟಿಯಾಗಿತ್ತು.