ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ 15 ಪುಸ್ತಕಗಳ ಲೋಕಾರ್ಪಣೆ
– ಸಾಹಿತಿ ಮಾಚೇನಹಳ್ಳಿ ರಾಮಕೃಷ್ಣ ಅವರಿಂದ ವಿನೂತನ ಕಾರ್ಯಕ್ರಮ
– ಹೊಸದುರ್ಗ: ಡಾ.ರಾಜಕುಮಾರ್ ಸಂಘದ ನೂತನ ಅಧ್ಯಕ್ಷರಾಗಿ ಗೌಡ್ರ ತಿಪ್ಪೇಸ್ವಾಮಿ
ಹೊಸದುರ್ಗ:ನವೆಂಬರ್ 9ರಂದು ಬೆಳಿಗ್ಗೆ 11:30ಕ್ಕೆ ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಸವಿ ನೆನಪಿಗಾಗಿ 15 ಪುಸ್ತಕಗಳನ್ನ ಲೋಕಾರ್ಪಣೆ ಮಾಡಲಾಗುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪ ಅವ್ವ ಪಬ್ಲಿಕೇಶನ್ಸ್ ಮುಖ್ಯಸ್ಥ ಮಾಚೇನಹಳ್ಳಿ ರಾಮಕೃಷ್ಣ ತಿಳಿಸಿದರು.
ನಗರದಲ್ಲಿ ನಡೆದ ಪೂರ್ವಬಾವಿ ಸಬೆಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಬಿಜಿ ಗೋವಿಂದಪ್ಪನವರು ಉದ್ಘಾಟಿಸಲಿದ್ದು ಕನಕ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ ಎಚ್ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್ ಮಂಜುನಾಥ್ .ಡಿ ದೇವರಾಜ ಅರಸು ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ ಸಿ ರಘುಚಂದನ್ ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂದರಾ ಭೂಪತಿ, ವಿಜಯ ಕರ್ನಾಟಕ ಹಿರಿಯ ಸಂಪಾದಕ ಸೋಮಶೇಖರ್ ಕಿಲಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪ್ರೌಢಶಾಲಾ ಹಂತದಲ್ಲಿ ನಡೆಯುವ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಿರುವ ತಾಲೂಕಿನ 47 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಮಾಜಿ ಸಚಿವೆ, ಸಾಹಿತಿ ಬಿಟಿ ಲಲಿತ ನಾಯಕ್ ರವರ ಬದುಕು ಮುತ್ತು ಬರಹಕ್ಕೆ ಸಂಬಂಧಿಸಿದ ವ್ಯಕ್ತಿ ಚಿತ್ರ ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳೇ ಪರೀಕ್ಷೆಯನ್ನು ನಗುತ್ತಾ ಎದುರಿಸಿ, ಲೂಸಿ ಮರ ಏರುತ್ತಿದ್ದಳೇ ? ಶ್ರೀಗಂಧವನ, ಆಗಸ್ಟ್ ನೆನಪುಗಳು ಜೇನು ಕೃಷಿ ನೀಲಗ್ರಹ ಅವಸರದಲ್ಲಿದೆಯೇ, ಮಕ್ಕಳಿಗಾಗಿ ಬೇಸಿಕ್ ಕಂಪ್ಯೂಟರ್, ಯಕ್ಷಪ್ರಶ್ನೆ ಮೊಗ್ಗು ಅರಳುವ ಸಮಯ ಈ 15 ಕೃತಿಗಳು ಲೋಕಾರ್ಪಣೆಗೊಳ್ಳುವವು ಎಂದು ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ಸ್ ಮುಖ್ಯಸ್ಥ ಮಾಚೇನಹಳ್ಳಿ ರಾಮಕೃಷ್ಣ ತಿಳಿಸಿದರು. ಸಭೆಯಲ್ಲಿ ಬಿ ವೈ ವಾಣಿಶ್ರೀ ರಾಮ್ಕಿ ಇದ್ದರು.
ಡಾ.ರಾಜಕುಮಾರ್ ಸಂಘದ ನೂತನ ಅಧ್ಯಕ್ಷರಾಗಿ ಗೌಡ್ರ ತಿಪ್ಪೇಸ್ವಾಮಿ
ಹೊಸದುರ್ಗ : ಡಾ.ರಾಜಕುಮಾರ್ ಸಂಘದ ನೂತನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸರ್ವಾನು ಮತದಿಂದ ಅಧ್ಯಕ್ಷರಾಗಿ ನಾಮ ನಿರ್ದೇಶನ ಪುರ ಸಭಾ ಸದಸ್ಯ ಗೌಡ್ರ ತಿಪ್ಪೇಸ್ವಾಮಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ತಂಗಾಳಿ ತಮ್ಮಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಶಹಜಾನ್ , ಸಹ ಕಾರ್ಯದರ್ಶಿಯಾಗಿ ಜಾದು ಮೋಹನ್ ಖಜಾಂಚಿ ಆಗಿ ಎ ಎಸ್ ಕೊಟ್ರೇಶ್, ಗೌರವಾಧ್ಯಕ್ಷರಾಗಿ ಆಗ್ರೋ ಶಿವಣ್ಣನವರು ಶೀತಲ್ ಕುಮಾರ್ ರವರು ಎಂಎಸ್ ನಾಗರಾಜ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.ರಾಜಕುಮಾರ್ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗೌಡ್ರ ತಿಪ್ಪೇಸ್ವಾಮಿ ಮಾತನಾಡಿ ಕನ್ನಡ ನಾಡು ನುಡಿ ನೆಲಜಲಕ್ಕೆ ಸಂಬಂಧಿಸಿದಂತೆ ಡಾ.ರಾಜಕುಮಾರ್ ಅವರು ತನ್ನ ಜೀವನವನ್ನು ಮೀಸಲಿರಿಸಿದ್ದರು ಅವರು ಎಂದಿಗೂ ಕನ್ನಡ ಚಿತ್ರರಂಗವನ್ನು ಬಿಟ್ಟು ಬೇರೆ ಚಿತ್ರರಂಗದಲ್ಲಿ ಅಭಿನಯ ಮಾಡಲಿಲ್ಲ. ನಮ್ಮ ಕನ್ನಡ ನಾಡು ನುಡಿಗೆ ಧಕ್ಕೆ ಬಂದರೆ ಎಂತಹ ಹೋರಾಟ ಮಾಡಲು ನಮ್ಮ ಸಂಘಟನೆ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.