ವಿದ್ಯೆ ಗಳಿಸಿದ ಬುದ್ಧಿವಂತರಲ್ಲಿ ವಿನಯ, ಸಂಸ್ಕಾರ ಮರೆ
– ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ
ಶ್ರೀ ಪಂಡಿತರಾಧ್ಯ ಸ್ವಾಮೀಜಿ ಬೇಸರ
– ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ತಾಲೂಕು ಹೊಸದುರ್ಗ: ನವೀನ್
NAMMUR EXPRESS NEWS
ಹೊಸದುರ್ಗ: ದೇಶ ವಿದೇಶದಲ್ಲಿ ಶಿಕ್ಷಣ ಪಡೆಯುವವರು ವೃದ್ಧಾಪ್ಯದಲ್ಲಿರುವ ತನ್ನ ತಂದೆ ತಾಯಿಗಳ ಆರೋಗ್ಯವನ್ನು ನೋಡಿಕೊಳ್ಳುವುದಿಲ್ಲ. ವಿದ್ಯೆ ಗಳಿಸಿದ ಬುದ್ಧಿವಂತರು ವಿನಯ ಮರೆಯುತ್ತಿದ್ದಾರೆ. ವೃದ್ಧ ತಂದೆ ತಾಯಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಭ್ರಷ್ಟತೆಯೆಂಬ ವಿಷ ವೃಕ್ಷದಿಂದ ಹೊರ ಬಂದಾಗ ಸದೃಢ ಸಮಾಜ ನಿರ್ಮಾಣವಾಗಬಲ್ಲದು ಎಂದು ಶ್ರೀ ಪಂಡಿತರಾಧ್ಯ ಸ್ವಾಮೀಜಿ ತಿಳಿಸಿದರು.
ಹೊಸದುರ್ಗ ನಗರದ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಅಭಿನಂದನೆ ಹಾಗೂ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೋತ್ಸಾಹಿಸುವ ಮನಸ್ಥಿತಿ ಇಲ್ಲದಿದ್ದರೆ ಜಾಣರು ಕೂಡ ದಡ್ಡರಾಗಬಲ್ಲರು. ಯಾವತ್ತೂ ನಮ್ಮ ಮಕ್ಕಳನ್ನು ಜಗಳಬಾರದು. ಅವರಿಗೆ ಮನೋಬಲವನ್ನ ಮೂಡಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಆದಾಯ ಸ್ವಲ್ಪ ಭಾಗವನಾದರೂ ಸಮಾಜಕ್ಕೆ ಅರ್ಪಿಸಬೇಕು. ಅದಕ್ಕೆ ನಾನೊಬ್ಬನೇ ಬೆಳೆದರೆ ಅದಕ್ಕೆ ಬೆಲೆ ಇರುವುದಿಲ್ಲ ಬದಲಾಗಿ ಹತ್ತು ಜನರನ್ನು ಬೆಳೆಸಿದಾಗ ನಿಮಗೆ ಸಮಾಜದಲ್ಲಿ ಗೌರವ ಘನತೆ ಹೆಚ್ಚಾಗುತ್ತದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ ಡಾ. ಶಾಂತವೀರ ಸ್ವಾಮೀಜಿ ಮಾತನಾಡಿ ನೈತಿಕ ಶಿಕ್ಷಣದ ಆದಪತನದಿಂದ ಶಿಕ್ಷಣ ಪಡೆದವರು ಅಣ್ಣ ತಮ್ಮನನ್ನ ಕೊಲೆ ಮಾಡುವುದು ಮಗ ತಂದೆಯನ್ನ ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ನಾನು ನಾನು ಎಂಬ ಅಹಂಕಾರದಿಂದ ಇಡೀ ಮಾನವ ಕುಲ ನಶಿಸಿ ಹೋಗುವ ಕಾಲಘಟ್ಟದಲ್ಲಿದೆ. ಲಿಂಗವೆಂಬುದು ಬೆಳಕು,ಜ್ಞಾನ ಮತ್ತು ಶ್ರೇಷ್ಠತೆಯ ಸಂಕೇತ. ಸಂಘದ ಮೇಲೆ ಲಿಂಗ ಬಿದ್ದರೆ ಯಾವುದೇ ಮೈಲಿಗೆ ಇರುವುದಿಲ್ಲ. ವಿಭೂತಿ ಲಿಂಗ ಹಾಗೂ ರುದ್ರಾಕ್ಷಿಗೆ ಜಾತಿ ಇಲ್ಲ ಎಲ್ಲರೂ ಇದನ್ನು ಧರಿಸಿ ಸಂಸ್ಕಾರ ಪಡೆದುಕೊಳ್ಳಬಹುದು. ನಮ್ಮ ಮಕ್ಕಳಿಗೆ ಧಾರ್ಮಿಕ ಸನ್ನಡತೆ ಕಲಿಸುವ ಅನಿವಾರ್ಯತೆ ಇದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಮಾತನಾಡಿ, ಮಕ್ಕಳ ಅಂಕಗಳಿಗೆಯಿಂದ ನಾವು ನೀಡುವ ಪುರಸ್ಕಾರ ಗೌರವಗಳು ನಾಳಿನ ಭವಿಷ್ಯದ ಸಾಧನೆಗೆ ಪ್ರೇರಣೆಯಾಗಲಿ. ಇಂದಿನ ಯುವ ಸಮುದಾಯ ಶಿಕ್ಷಣದ ಜೊತೆಗೆ ತಂದೆ ತಾಯಿ ಗುರು ಹಿರಿಯರನ್ನ ಗೌರವಿಸುವ ಶಿಕ್ಷಣವನ್ನು ಕಲಿಯುವ ಅಗತ್ಯತೆ ಇದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯುವ ಹೊಸದುರ್ಗ ತಾಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ಹಾಹಾಕಾರ ತಲೆದೊರುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣವಾದರೆ ಈ ಭಾಗದ ರೈತ ನೆಮ್ಮದಿ ಜೀವನ ನಡೆಸಬಲ್ಲನು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಹಡಿ ಶಿವಮೂರ್ತಿ, ತಾಲೂಕು ಅಧ್ಯಕ್ಷ ಶಶಿಧರ್, ಸಾಹಿತಿ ಚಟ್ನಳ್ಳಿ ಮಹೇಶ್, ನಿವೃತ್ತ ಪೊಲೀಸ್ ಆಯುಕ್ತ ಸಿದ್ಧರಾಮಪ್ಪ, ನಿಜಲಿಂಗಪ್ಪ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆಎಸ್ ಕಲ್ಮಠ, ಚೆನ್ನಗಿರಿ ಬಿಇಓ ಜಯಪ್ಪ, ಮಾಜಿ ಜಿ ಪಂ ಹನುಮಂತಪ್ಪ, ಗುರುಸ್ವಾಮಿ,ದ್ಯಾಮಪ್ಪ, ವಕೀಲರ ಸಂಘದ ಅಧ್ಯಕ್ಷ ಎಚ್ ಬಿ ರವಿಕುಮಾರ್, ರಾಗಿ ಶಿವಮೂರ್ತಿ, ಮರಿದಿಮಪ್ಪ, ಎಂಪಿ ರಂಗೇಶ್ ಹೆಬ್ಬಳ್ಳಿ ಮಲ್ಲಿಕಾರ್ಜುನ್ ಗೂಳಿಹಟ್ಟಿ ಜಗದೀಶ್, ಮಂಜುನಾಥ್, ದಾನೇಶ್, ತಾಲೂಕು ಕಸಾಪ ಅಧ್ಯಕ್ಷ ಬಿಪಿ ಓಂಕಾರಪ್ಪ ಅಶೋಕ್, ಪ್ರಕಾಶ್, ಹಾಗೂ ತಾಲೂಕು ವೀರಶೈವ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ವೀರಶೈವ ಸಮಾಜ ಬಂಧುಗಳು ಭಾಗವಹಿಸಿದ್ದರು.