ಶನೇಶ್ವರ ಸ್ವಾಮಿ ಸ್ವಾಮಿಗೆ ಉಘೇ ಉಘೇ..!
– ಶ್ರದ್ಧಾ ಭಕ್ತಿಯ ವೈಭವದ ಶನೇಶ್ವರ ಸ್ವಾಮಿ ಮೆರವಣಿಗೆ
– ಭಕ್ತರ ಗಮನ ಸೆಳೆದ ದೇವರುಗಳ ಮೆರವಣಿಗೆ
NAMMUR EXPRESS NEWS
ಹೊಸದುರ್ಗ: ಹೊಸದುರ್ಗ ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ಹುಳಿಯಾರು ರಸ್ತೆಯಲ್ಲಿನ ನೂತನವಾಗಿ ಲೋಕಾರ್ಪಣೆಗೆ ಸಿದ್ದಗೊಂಡಿರುವ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ದೇವರುಗಳ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಾಗಿತು.
ನಗರದ ಗ್ರಾಮದೇವತೆ ದುರ್ಗಾಂಬಿಕಾದೇವಿ, ಬನಶಂಕರಿ ದೇವಿ, ಪ್ಲೇಗದಮ್ಮದೇವಿ, ಅಂತರಘಟ್ಟಮ್ಮದೇವಿ, ಕಾಳಮ್ಮ, ಗೊರವಿನಕಲ್ಲು ಕಂಬದ ನರಸಿಂಹಸ್ವಾಮಿ, ಹೊಸದುರ್ಗದ ರಾಮದೇವರು, ಕುರುಬರಹಳ್ಳಿ ಕರಿಯಮ್ಮ, ಬುಕ್ಕಸಾಗರ ಆಂಜನೇಯ ಸ್ವಾಮಿ, ಹಟ್ಟಿ ದುರ್ಗಾಂಭ ದೇವಿ, ಪಟ್ಟಣದ ವೀರಭದ್ರೇಶ್ವರ ಸ್ವಾಮಿ, ಕುಕ್ಕುವಾಡೇಶ್ವರಿದೇವಿ, ಕಾಳಮ್ಮ, ಕರುಮಾರಿಮ್ಮದೇವಿ ಹಾಗೂ ಪುರದ ಲಕ್ಷ್ಮೀ ರಂಗನಾಥಸ್ವಾಮಿ ದೇವರು ಮೆರವಣಿಗೆ ಪಟ್ಟಣದಲ್ಲಿ ಸಾಗಿತು.
ಭವ್ಯವಾದ ಅಲಂಕೃತಗೊಂಡ ದೇವರುಗಳ ಮೆರವಣಿಗೆ ನೋಡುಗರ ಕಣ್ಮನ ಸೆಳೆಯುವಂತಿತ್ತು. ಪಟ್ಟಣದ ಅಧಿದೇವತೆ ದುರ್ಗಾಂಬಿಕಾ ದೇವಿ ಸನ್ನಿಧಿಯಲ್ಲಿ ಪೂಜೆ ಮಾಡಿಸಿ, ಆರಂಭವಾದ ಮೆರವಣಿಗೆ ಬಸವೇಶ್ವರ ವೃತ್ತ, ಹುಳಿಯಾರು ವೃತ್ತದ ಮೂಲಕ ವೀರಭದ್ರೇಶ್ವರ ಹಾಗೂ ಸಾಯಿ ಮಂದಿರದ ಮಾರ್ಗವಾಗಿ ಶನೇಶ್ವರ ಸ್ವಾಮಿ ದೇವಾಲಯ ತಲುಪಿತು.