- ಕ್ಷಯ ರೋಗದ ವಿರುದ್ಧ ನಟನೆಗೆ ಇಳಿದ ಸಾನಿಯಾ
ನವ ದೆಹಲಿ: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇದೀಗ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಟೆನಿಸ್ ಜತೆ ತನ್ನ ಸ್ಟೈಲ್ ಹಾಗೂ ಸೌಂದರ್ಯದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಸಾನಿಯಾ “ಎಂಟಿವಿ ನಿಷೇಧ್ ಅಲೋನ್ ಟುಗೆದರ್” ಎಂಬ ವೆಬ್ ಸೀರಿಸ್ನಲ್ಲಿ ನಟನೆ ಮಾಡಲಿದ್ದಾರೆ.
ಹತ್ತಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಸಾನಿಯಾ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ವೆಬ್ ಸೀರಿಸ್ನಲ್ಲಿ ನಟಿಸಲು ಮುಂದಾಗಿದ್ದಾರೆ. ಕ್ಷಯರೋಗ ಯಾವಾಗಲು ಅಪಾಯ. ಕೊರೊನಾ ಸಮಯದಲ್ಲಿ ಇದು ಮತ್ತಷ್ಟು ಅಪಾಯವನ್ನು ಹೆಚ್ಚಿಸಿದೆ. ಟಿಬಿಯನ್ನು ನಿಗ್ರಹಿಸುವ ಹೋರಾಟ ಎಂದಿಗಿಂತಲೂ ಈಗ ಕಷ್ಟಕರವಾಗಿದೆ. ಮತ್ತು ಅದರಲ್ಲಿ ಒಂದು ಪಾತ್ರವನ್ನು ವಹಿಸಲು ನನ್ನನ್ನು ಪ್ರೇರೇಪಿಸಿತು. ನನ್ನ ಭಾಗವಹಿಸುವಿಕೆ ಟಿಬಿ ವಿರುದ್ಧ ಒಟ್ಟಾಗಿ ಹೋರಾಡಲು ಮತ್ತ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.