- ಅಗಲಿದ ನಾಯಕನ ಜನ್ಮದಿನದಂದು ಸೇವೆ ಸ್ಮರಿಸೋಣ
NAMMUR EXPRESS NEWS
ದೇಶ ಕಂಡ ಅಪ್ರತಿಮ ನಟ, ಜನ ಸೇವಕ, ಲಕ್ಷ ಲಕ್ಷ ಜನರಿಗೆ ಮಾದರಿಯಾಗಿರುವ ಪುನೀತ್ ರಾಜ್ ಕುಮಾರ್ ಜನ್ಮ ದಿನ ಇಂದು. ನಾಡಿನ ಎಲ್ಲೆಡೆ ಪುನೀತ್ ಹೆಸರಲ್ಲಿ ವಿವಿಧ ರಕ್ತದಾನ, ನೇತ್ರದಾನ, ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪುನೀತ್ ಹೆಸರು ಅಮರವಾಗುತ್ತಿದೆ.
ಪುನೀತ್ ರಾಜಕುಮಾರ್ ಬರೀ ನಟ ಅಲ್ಲದೆ ನಿರ್ಮಾಪಕ, ಗಾಯಕ , ನಿರೂಪಕ ಆಗಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.
50ಕ್ಕೂ ಅಧಿಕ ಸಿನಿಮಾದಲ್ಲಿ ಹಾಡಿ ಅದರಲ್ಲಿ ಬಂದ ಹಣವನ್ನು ಸಮಾಜ ಸೇವೆ ಸಂಪೂರ್ಣವಾಗಿ ಬಳಸಿ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.
ಜೊತೆಗಿರದ ಜೀವ ಎಂದಿಗೂ ಜೀವಂತ.
ಎಲ್ಲದಾಗು ಸೈ ಎನಿಸಿಕೊಂಡ ನಟ ಒಮ್ಮೆಲೆ ನಮ್ಮನು ಆಗಲಿ ಹೋಗಿಯೇ ಬಿಡುತ್ತಾರೆ. ಆಗ ಮಾತ್ರ ಆಕ್ಷರ ಸಹ ಇಡೀ ಕರ್ನಾಟಕ ಅನ್ನೋದಕ್ಕಿಂತ ಇಡೀ ಭಾರತದಲ್ಲಿ ಸ್ಮಶಾನ ಮೌನದಲ್ಲಿ ತುಂಬಿರುತ್ತದೆ.
ದೊಡ್ಡವರು ಹೇಳುವ “ಬದುಕಿ ಸಾಯೋದಕ್ಕಿಂತ ಸತ್ತು ಬದುಕ ಬೇಕು ಲೇಸು” ಎಂಬ ಮಾತಿಗೆ ನಿದರ್ಶನ ಆಗಿದ್ದಾರೆ ಅಪ್ಪು.
ಅಪ್ಪು ವಿನ ಅಂತಿಮ ದರ್ಶನಕ್ಕೆ ಬಂದ ಸಾಗರೋಪಾದಿಯಲ್ಲಿ ಜನರನ್ನು ನೋಡಿದಾಗಲೇ ತಿಳಿಯುತ್ತದೆ ಬಂಗಾರದ ಮನುಷ್ಯನ ಮಗ ಅಪ್ಪಟ ಬಂಗಾರ ಎಂದು.ಅಪ್ಪು ಮರಣದ ನಂತರ ನಡೆದದ್ದು ಮಾತ್ರ ಇತಿಹಾಸವೇ ಸರಿ.
ಸಹಸ್ರಾರು ಸಂಖ್ಯೆಯಲ್ಲಿ ಹುಟ್ಟಿದ ಅಭಿಮಾನಿ ಬಳಗಕ್ಕೆ ಅಪ್ಪು ದೇವತಾ ಮನುಷ್ಯನೇ ಸರಿ. ಈಗಲೂ ನಡೆಯುತ್ತಿರುವ ಅ ದೇವತಾ ಮನುಷ್ಯನ ಹೆಸರಿನಲ್ಲಿನ ಸಮಾಜ ಸೇವೆಯೇ ಎಲ್ಲರಿಗೂ ಮಾದರಿ ಆಗಿದೆ.
ನಮ್ಮನು ಆಗಲಿ ಒಂದು ವರ್ಷ ಆದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಾಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.
ಜೊತೆಗೆ ಇರದ ಜೀವ ಎಂದಿಗೂ ಜೀವಂತ
ತೊರೆದು ಇಲ್ಲಿಗೆ ಒಂದು ವರ್ಷ ಆದರೂ ಸಹ ಕರುನಾಡ ಜನರ ಮನದಲ್ಲಿ ಇನ್ನೂ ಜೀವಂತವಾಗಿ ಬದುಕಿದ್ದಾರೆ. ಇವರು ಎಲೆ ಮಾರೆ ಕಾಯಿಯಂತೆ ಯಾರಿಗೂ ತಿಳಿಯಾದೇ ಮಾಡುತ್ತಿದ್ದ ಜನರ ಸೇವೆಯೇ ಇವರನ್ನು ಸಾವಿರಾರು ಅಭಿಮಾನಿಗಳು ಮನದಲ್ಲಿ ಆರಾಧಿಸುವಂತೆ ಮಾಡಿದೆ.
“ಜೊತೆಗೆ ಇರದ ಜೀವ ಎಂದಿಗೂ ಜೀವಂತ”