- ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ: 25 ದಿನ ಪೂರೈಸಿದೆ ಸಿನಿಮಾ
- ಸಿನಿಮಾ ಹೇಳಿದ ಕಥೆ ಎಲ್ಲರಿಗೂ ಇಷ್ಟವಾಯ್ತು
- ಮಲೆನಾಡ ಚಿತ್ರೀಕರಣ, ಮಲೆನಾಡ ಕಲಾವಿದರ ಸಿನಿಮಾ
NAMMUR EXPRESS NEWS
ಬದುಕನ್ನು ಬಂದಹಾಗೆ ಸ್ವೀಕರಿಸಿ. ಹೊಂದಾಣಿಕೆಯಿಂದ ಬಾಳಿ, ಬೆಳಕು ಇರುವಲ್ಲಿ ಕತ್ತಲಿಗೆ ಜಾಗವಿಲ್ಲ ಹೀಗೆ ಬದುಕು, ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’.
ಮಲೆನಾಡ ನಟ ಪ್ರವೀಣ್ ತೇಜ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ,ಭಾವನಾ, ಶ್ರೀ ಮಹದೇವ್, ಅರ್ಚನಾ, ನವೀನ್ ಸೇರಿದಂತೆ ಅನೇಕರ ನಟನೆಯ ಈ ಸಿನಿಮಾ ಈಗಾಗಲೇ 25 ದಿನ ಪೂರೈಸಿದೆ.
ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಈಗ ಜನರ ಮೆಚ್ಚುಗೆ ಪಡೆಯುತ್ತಿದೆ.
ಕಾಲೇಜು ಹುಡುಗರ ತುಂಟತನ, ಹೀರೊ ಬಿಲ್ಡಪ್ಗೆ ಹೊಡೆದಾಟ, ಸೀನಿಯರ್- ಜ್ಯೂನಿಯರ್ ತರಲೆ, ಒಂದೆರಡು ಕ್ಷಣ ನಗು ಮೂಡಿಸಿ ಮಾಯವಾಗುವ ಸನ್ನಿವೇಶ, ಎಂಜಿನಿಯರಿಂಗ್ ಕಾಲೇಜು ಹುಡುಗ-ಹುಡುಗಿಯರ ಎಂಟನೇ ತರಗತಿ ಮಟ್ಟದ ಪ್ರೇಮಕಥೆ, ಪ್ರೇಯಸಿಗೆ ಮುತ್ತಿಟ್ಟವನನ್ನು ಎಳೆದೊಯ್ಯುವ ಪೊಲೀಸ್ಗಿರಿ! ಇದನ್ನೆಲ್ಲ ಹೊಂದಿಸಿ ತೆಗೆದ ಸಿನಿಮಾ ಇದು.
ಮಲೆನಾಡಿನ ಕುಪ್ಪಳಿಯ ಕವಿಶೈಲ, ಸಮುದ್ರ ತೀರ, ಮಲೆನಾಡು ತಾಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಪ್ರಸ್ತುತ ಅಹಂನಿಂದ ಮನದೊಳಗೆ ಗೋಡೆ ಕಟ್ಟಿಕೊಂಡು ಬಾಳುವ ಯುವ ಜೋಡಿಗಳಿಗೆ ಈ ಚಿತ್ರ ಪ್ರಬಲವಾದ ಸಂದೇಶ ನೀಡಿದೆ. ಒಟ್ಟಿನಲ್ಲಿ ಆರ್ಭಟಗಳಿಲ್ಲದ, ಶಾಂತ ಹರಿವಿನ ಸಿನಿಮಾ ನೋಡಬೇಕೆನ್ನುವವರಿಗೆ, ಒಂದಿಷ್ಟು ಸಂದೇಶ ಬಯಸುವವರಿಗೆ ಇಷ್ಟವಾಗಬಹುದಾದ ಚಿತ್ರ.
ಒಂದೊಳ್ಳೆ ಸಿನಿಮಾವನ್ನು ತಾವೆಲ್ಲರೂ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಣೆ ಮಾಡಿ. ಹೊಸಬರ ಚಿತ್ರಗಳನ್ನು ಬೆಳೆಸಿ ಎಂಬುದಷ್ಟೇ ನಮ್ಮ ಕೊನೆ ಮಾತು.