ಹೊಸ ಮೆಸೇಜ್ ನೀಡಿದ “90 ಬಿಡಿ ಮನೀಗ್ ನಡಿ” ಚಿತ್ರ ತಂಡ!
– ಸಾಮಾಜಿಕ ಸಂದೇಶ ಸಾರುವ ಚಿತ್ರಕ್ಕೆ ಬೆಂಬಲಿಸಿ : ನಟಿ ನೀತಾ ಹಿರೇಮಠ
– ಹಾಸ್ಯ ಕಲಾವಿದ ವೈಜನಾಥ ಬಿರಾದಾರ ಅಭಿನಯದ 500ನೆಯ ಚಿತ್ರ
– ಮಧ್ಯಪಾನ ಸೇವನೆಯಿಂದ ಬೀರುವ ಅಡ್ಡ ಪರಿಣಾಮಗಳ ಕುರಿತು ಜಾಗೃತಿ ಸಾರುವ ಚಿತ್ರ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸಿಂದಗಿ: ಸಾಮಾಜಿಕ ಸಂದೇಶವುಳ್ಳ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಬೇಕಾಗಿದೆ ಎಂದು “90 ಬಿಡಿ ಮನೀಗ್ ನಡಿ” ಚಿತ್ರದ ನಾಯಕಿ ನೀತಾ ಹಿರೇಮಠ ಹೇಳಿದರು.
ಉಮೇಶ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ನಿರ್ದೇಶನದ, 9೦ರ ದಶಕದಲ್ಲಿ ಪ್ರಸಿದ್ದ ಹಾಸ್ಯ ಕಲಾವಿದರಲ್ಲೊಬ್ಬರಾಗಿದ್ದ ವೈಜನಾಥ ಬಿರಾದಾರವರ ಅಭಿನಯದ 5೦೦ನೇ ಚಿತ್ರ ಹಾಗೂ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ “90 ಬಿಡಿ ಮನೀಗ್ ನಡಿ” ಜೂ.29 ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಿದೆ. ಈ ಹಿನ್ನಲೆ ಪಟ್ಟಣದ ವಿನಾಯಕ ಚಿತ್ರ ಮಂದಿರಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ನಾನು ವಿಜಯಪುರ ಜಿಲ್ಲೆಯ ಕಲಾವಿದೆ, ಈ ಮೊದಲು ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದೆ ಮೊಟ್ಟ ಮೊದಲ ಬಾರಿಗೆ ಈ ಚಿತ್ರದ ನಾಯಕ ನಟಿಯಾಗಿ ಅಭಿನಯಿಸಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದೇನೆ.
ಸಾಮಾಜಿಕ ಸಂದೇಶವುಳ್ಳ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಬೇಕಿದೆ. ನಾನು ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದೇನೆ ಮೊದ ಮೊದಲು ಈ ಪಾತ್ರ ಮಾಡಲು ಹಿಂಜರಿಕೆ ಇತ್ತು ಸಹಪಾಠಿ ಕಲಾವಿದರ ಬೆಂಬಲದಿಂದ ಪಾತ್ರಕ್ಕೆ ಜೀವ ತುಂಬಿದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಉತ್ತರ ಕರ್ನಾಟಕದವರೇ ಆಗಿದ್ದಾರೆ ಎಂದು ಹೇಳಿದರು.
ಮಾತನಾಡಿದ ಪತ್ರಕರ್ತ ಬೆನಕರಾಜ ಜೋಗುರ ಮದ್ಯ ವ್ಯಸನದಿಂದ ಆಗುವ ಹಾನಿಯ ಕುರಿತಾಗಿ ಸುಂದರ ಚಿತ್ರವನ್ನು ನಮ್ಮ ಉತ್ತರ ಕರ್ನಾಟಕದ ಜನ ರಾಜ್ಯದ ಮುಂದೆ ಪ್ರಸ್ತುತ ಪಡಿಸಿದೆ. ಚಟ ಮುಕ್ತರಾಗ ಬಯಸುವವರು ಈ ಚಿತ್ರವನ್ನು ತಪ್ಪದೇ ನೋಡಿ ಎಂದರು. ಕಲಾವಿದ ಆರ್.ಡಿ.ಬಾಬು ಮಾತನಾಡಿದರು.
ವಿವಿಧ ಭೂಮಿಕೆ ಕಲಾವಿದರು ಚಿತ್ರದ ನಾಯಕಿ ನೀತಾ ಹಿರೇಮಠರವರಿಗೆ ಸನ್ಮಾನ ಮಾಡಿದರು.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023