“ಡೇರ್ ಡೆವಿಲ್ ಮುಸ್ತಫಾ” ಹಾಫ್ ಸೆಂಚುರಿ ಸಂಭ್ರಮ!
– ತೇಜಸ್ವಿಯವರ ಸಣ್ಣ ಕಥೆ ಸಿನಿಮಾವಾಗಿ ಗೆದ್ದಿತು
– 50 ದಿನ ಪೂರೈಸಿದ ಚಿತ್ರತಂಡಕ್ಕೆ ಪಲಾವ್ ಪಾರ್ಟಿ!
– ಡಾಲಿ ಧನಂಜಯ ಹೊಸ ಪ್ರಯೋಗ
NAMMUR EXPRESS NEWS
ಬೆಂಗಳೂರು: ಒಳ್ಳೆ ಕಥೆ, ಒಳ್ಳೆಯ ಸಿನಿಮಾಗಳು ತೆರೆ ಕಂಡಾಗ ಖಂಡಿತ ಕರ್ನಾಟಕ ಗೆಲ್ಲಿಸುತ್ತದೆ ಎನ್ನುವುದಕ್ಕೆ ಇದೀಗ ಮತ್ತೊಂದು ಸಿನಿಮಾದ ಗೆಲುವು ಸಾಕ್ಷಿಯಾಗಿದೆ.
ಜನರ ಉತ್ತಮ ಪ್ರಶಂಸೆಯಿಂದಲೇ ಗೆದ್ದ ಚಿತ್ರ ಡೇರ್ ಡೆವಿಲ್ ಮುಸ್ತಫಾ. ಈ ಸಿನಿಮಾ ಮೇ 19ಕ್ಕೆ ತೆರೆ ಕಂಡಿದ್ದು 50 ದಿನ ಪೂರೈಸಿದೆ. ಚಿತ್ರಕ್ಕೆ ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ನಡಿ ಅರ್ಪಿಸಿದ್ದು, ಕೆ.ಆರ್.ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.
ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಸಿನಿಮಾದ ಭಾಗವಾಗಿದ್ದಾರೆ. ದಿನಗಳಲ್ಲಿ ಸಿನಿಮಾಗಳನ್ನು ಥಿಯೇಟರ್ಗಳಲ್ಲಿ ಬಂದು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇಂತಹ ಹೊತ್ತಿನಲ್ಲಿ ಕನ್ನಡ ಸಿನಿಮಾವೊಂದು ಯಶಸ್ವಿಯಾಗಿ 50 ದಿನ ಪೂರೈಸಿದೆ. ಸಿನಿಮಾ ಥಿಯೇಟರ್ನಲ್ಲಿ ಬರೋಬ್ಬರಿ ಐವತ್ತು ದಿನ ಪೂರೈಸಿ, ಓಟಿಟಿ ಪ್ಲಾಟ್ಫಾರ್ಮ್ ಅಮೆಜಾನ್ ಪ್ರೈಮ್ನಲ್ಲೂ ಭರಪೂರ ಮೆಚ್ಚುಗೆ ಪಡೆಯುತ್ತಿದೆ.
ಅಭಿಮಾನಿಗಳಿಂದ ನಿರ್ಮಾಣವಾದ ಡೇರ್ ಡೆವಿಲ್ ಮುಸ್ತಫಾ!
ತೇಜಸ್ವಿ ಅವರು ರಚಿಸಿರುವ ಸಣ್ಣ ಕಥೆಯನ್ನು ತೆಗೆದು ಕೊಂಡು ಅದನ್ನು ಅದೇ ಹೆಸರಿನಿಂದ ತೆರೆಗೆ ತರುವುದು ಸಾಮಾನ್ಯದ ಕೆಲಸ ಅಲ್ಲ. ಅ ಕೆಲಸವನ್ನು ಶಶಾಂಕ್ ಸೋಗಲ್ ಅವರ ನಿರ್ದೇಶನ ಮಾಡಿ ಅಚ್ಚುಕಟ್ಟಾಗಿ ಮೂಡಿ ಬರುವಂತೆ ಮಾಡಿದ್ದಾರೆ .
ಈ ಚಿತ್ರದ ಮತ್ತೊಂದು ವಿಶೇಷ ನೂರಕ್ಕೂ ಹೆಚ್ಚು ಮಂದಿ ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳಿಂದ ಈ ಸಿನಿಮಾ ನಿರ್ಮಿಸಲಾಗಿದೆ.
ರಾಘವೇಂದ್ರ ಮಾಯಕೊಂಡ,ಆನಂದ ಶಾಂಡ್ರೇಯ ಶಶಾಂಕ್ ಸೋಗಲ್ ಅವರ ಬರಹ ತುಂಬಾ ಸೊಗಸಾಗಿ ಮೂಡಿಬಂದಿದೆ.ಇದರಲ್ಲಿ ಇರುವ ಸಂಗೀತ ಚಿತ್ರ ಕಥೆ ಎಲ್ಲವೂ ಕೂಡ ತುಂಬಾ ಚೆನ್ನಾಗಿದೆ ಈ ಚಿತ್ರದಲ್ಲಿ ಮೂಡಿ ಬಂದಿದೆ. ಇದು ಒಂದು ಕಾಮಿಡಿ ಚಿತ್ರ ಆಗಿದ್ದರೂ ಸಹ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತದೆ.
ಶಾಲಾ ಕಾಲೇಜು ಮಕ್ಕಳು ಒಮ್ಮೆ ನೋಡಲೇ ಬೇಕು.
ಮಕ್ಕಳಲ್ಲಿ ಸಾಮರಸ್ಯತೆ ಭಾವೈಕ್ಯತೆಯನು ಮೂಡಿಸಲು ತಂದೆ ತಾಯಿ ಅಥವಾ ಶಿಕ್ಷಕರು ಮಕ್ಕಳಿಗೆ ಈ ಸಿನಿಮಾವನ್ನು ತೋರಿಸಲೇಬೇಕು ಎಂಬಂತಿದೆ ಸಿನಿಮಾ.
50 ದಿನದ ಸಂಭ್ರಮ ಹೇಗಿತ್ತು ಗೊತ್ತಾ?
ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಐವತ್ತು ದಿನದ ಸಂಭ್ರಮಾಚರಣೆಯಲ್ಲಿ ಇಡೀ ತಂಡಕ್ಕೆ ಗೆಲುವಿನ ಪಾರಿತೋಷಕ ನೀಡಿ ಗೌರವಿಸಲಾಯಿತು. ಜೊತೆಗೆ ಬಿರಿಯಾನಿ, ಪುಳಿಯೋಗರೆ ಪಾರ್ಟಿ ಮಾಡಿ ಇಡೀ ಡೇರ್ ಡೆವಿಲ್ ಮುಸ್ತಾಫಾ ತಂಡ ಖುಷಿಪಟ್ಟಿತು. ಈ ಸಿನಿಮಾವನ್ನು ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿರುವ ನಟ ಧನಂಜಯ್ ಮಾತನಾಡಿ, “ನಾನು ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ, ಶಶಾಂಕ್ ಕಾಲೇಜ್ನಲ್ಲಿ ನನಗೆ ಜೂನಿಯರ್ ಅಲ್ಲಿಂದನೂ ನೋಡ್ತಾ ಇದ್ದೆ. ತುಂಬಾ ಜನ ನಿರ್ದೇಶಕರು ಆಗಬೇಕು ಎಂದು ಇಂಡಸ್ಟ್ರಿಗೆ ಬರುತ್ತಾರೆ. ನಾನು ಕಥೆ ಮಾಡಿದ್ದೇನೆ, ಇನ್ವೆಸ್ಟ್ ಮಾಡಿ ಅಂತಾರೇ ನಾನು ಅವರಿಗೆ ಶಶಾಂಕ್ ಅವರನ್ನು ಉದಾಹರಣೆಯಾಗಿ ಕೊಟ್ಟು ಕಳಿಸುತ್ತೇನೆ ಸೀದಾ ಬಂದು ಕಥೆ ಮಾಡಿದ್ದೇನೆ, ಕೋಟ್ಯಂತರ ರೂಪಾಯಿ ದುಡ್ಡು ಹಾಕಿ ಎಂದರೆ ಕಷ್ಟವಾಗುತ್ತದೆ. ಡೇರ್ ಡೆವಿಲ್ ಮುಸ್ತಫಾವನ್ನು ಮಾಸ್ ಸಿನಿಮಾ ಅಂತಾನೇ ಕರೆಯುತ್ತೇನೆ. ಥಿಯೇಟರ್ನಲ್ಲಿ ಕುಳಿತು ನೋಡಿ ಸೆಲೆಬ್ರೇಟ್ ಮಾಡುವ ಸಿನಿಮಾವಿದು. ಹಳೆ ಬೇರು ಹೊಸ ಚಿಗರು ಕೂಡಿರಲು ಮರ ಸೊಬಗು ಎನ್ನುವಂತೆ ಹಿರಿಯರು ಹಾಗೂ ಕಿರಿಯರು ಎಲ್ಲರೂ ಇಟ್ಟುಕೊಂಡು ಈ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ’ ಎಂದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023