ದರ್ಶನ್ ಅವರಿಗೆ ಕೊನೆಗೂ ಸಿಕ್ತು ಜಾಮೀನು
– ಬೇಲ್ ಸಿಕ್ರು ಬೆಂಗಳೂರಿಗೆ ಬರಲ್ಲ ದರ್ಶನ್..?
– ನಟ ದರ್ಶನ್ ಗೆ ಅನಾರೋಗ್ಯದ ಹಿನ್ನೆಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು
NAMMUR EXPRESS NEWS
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ವಿಲವಿಲ ಎನ್ನುವಂತಾಗಿದೆ. ಬೆಂಗಳೂರು ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೇಲೆ ನಟ ದರ್ಶನ್ಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾದಂತಹ ವಿಶ್ವಜೀತ್ ಶೆಟ್ಟಿ ಅವರ ಪೀಠದಲ್ಲಿ ನಡೆಯಿತು. ನಟ ದರ್ಶನ್ ಅವರ ಆರೋಗ್ಯದ ಕುರಿತು ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಅವರು ವಾದ ಮಂಡಿಸಿದ್ದು, ಅನಾರೋಗ್ಯದ ಕಾರಣದಿಂದಾಗಿ ಮಧ್ಯಂತರ ಜಮೀನು ನೀಡುವಂತೆ ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಕೇಳಿಕೊಂಡಿದ್ದು, ಮಧ್ಯಂತರ ಜಮೀನು ನೀಡಿದ್ರೆ, ದರ್ಶನ್ ಅವರು ಮೈಸೂರಿನಲ್ಲಿರುವ ರೀಗ್ ರಸ್ತೆ ಸಮೀಪದ ಅಪೋಲೋ ಆಸ್ಪತ್ರೆಯಲ್ಲಿ ದರ್ಶನ್ ಅವರು ಚಿಕಿತ್ಸೆ ಪಡೆಯಲಿದ್ದಾರೆ ಎಂದು ಸಿ ವಿ ನಾಗೇಶ್ ಅವರು ವಾದವನ್ನ ಮಂಡಿಸಿದ್ದಾರೆ.
ಮಧ್ಯಂತರ ಜಮೀನು ನೀಡುವ ಮೊದಲು ಮೆಡಿಕಲ್ ಬೋರ್ಡ್ ಅಭಿಪ್ರಾಯವನ್ನ ಪಡೆಯಬೇಕು ಎಂದು ಸುಪ್ರೀಕೋರ್ಟ್ ವಾದವನ್ನ ಉಲ್ಲೇಖಿಸಿ ಎಸ್ ಪಿಪಿ ಪ್ರಸಾದ್ ಕುಮಾರ್ ಅವರು ವಾದವನ್ನ ಮಂಡಿಸಿದ್ದಾರೆ. ದರ್ಶನ್ ಪರ ವಕೀಲರು ಮಧ್ಯಂತರ ಜಮೀನು ನೀಡಿ. ಅಲ್ಲದೇ ಮೂರು ತಿಂಗಳ ಕಾಲ ಮಧ್ಯಂತರ ಜಮೀನು ನೀಡುವಂತೆ ವಾದ ಮಂಡಿಸಿದ್ದಾರೆ. ಕೆಲವು ಹಳೆಯ ಪ್ರಕರಣಗಳು ಹಾಗೂ ಸುಪ್ರೀಂಕೋರ್ಟ್ನ ಕೆಲ ಆದೇಶಗಳನ್ನು ಸಹ ಉಲ್ಲೇಖ ಮಾಡಿದ ಸಿವಿ ನಾಗೇಶ್ ಅವರು, ಆರೋಗ್ಯ ಪ್ರತಿಯೊಬ್ಬರ ಹಕ್ಕು. ಅವರು ಎಂಥಹಾ ಕಠಿಣ ಪ್ರಕರಣದಲ್ಲಿ ಸಿಲುಕಿದ್ದರೂ ಸಹ ಮೆರಿಟ್ಗಳನ್ನು ನೋಡದೆ ಜಾಮೀನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಇಂಥಹಾ ಹಲವು ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ ಎಂದು ದರ್ಶನ್ ಪರ ವಕೀಲರು ವಾದವನ್ನ ಮಂಡಿಸಿದ್ದಾರೆ.
ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಮುಂದು ಮಾಡಿ ಜಾಮೀನು ಕೇಳಲಾಗಿದೆ. ದರ್ಶನ್ ಅವರಿಗೆ ಮೊದಲಿನಿಂದಲೂ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ಆದರೆ ಎಸ್ಪಿಪಿ ಅವರು ದರ್ಶನ್ ಜಾಮೀನು ಅರ್ಜಿಗೆ ಕೆಲ ತಕರಾರುಗಳನ್ನು ಎತ್ತಿದ್ದಾರೆ. ಅಲ್ಲದೇ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ಎಸ್ ಪಿಪಿ ಅವರು ಪ್ರತಿವಾದ ಮಾಡಿದ್ದಾರೆ. ಇಬ್ಬರ ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 30 ಕ್ಕೆ ಕಾಯ್ದಿರಿಸಲಾಗಿದೆ. ಒಂದು ವೇಳೆ ನಟ ದರ್ಶನ್ ಅವರಿಗೆ ಮಧ್ಯಂತರ ಜಮೀನು ಸಿಕ್ಕರೂ, ನಟ ದರ್ಶನ್ ಅವರು ಬೆಂಗಳೂರಿಗೆ ಬರುವುದಿಲ್ಲ. ಏಕೆಂದರೆ, ಮಂಗಳವಾರ ವಾದ ಮಂಡಿಸುವ ವೇಳೆ ನಟ ದರ್ಶನ್ ಅವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ, ದರ್ಶನ್ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ . ಹೀಗಾಗಿ ಅಕ್ಟೋಬರ್ 30 ತೀರ್ಪು ಹೊರಬರಲಿದ್ದು, ಒಂದು ವೇಳೆ ಮಧ್ಯಂತರ ಜಾಮೀನು ನೀಡಿದ್ರೆ, ನಟ ದರ್ಶನ್ ಮೈಸೂರಿಗೆ ತೆರಳಲಿದ್ದಾರೆ. ನಟ ದರ್ಶನ್ ಗೆ ಅನಾರೋಗ್ಯದ ಹಿನ್ನೆಲೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದ್ದು, ಷರತ್ತುಬದ್ಧವಾಗಿ ನಟ ದರ್ಶನ್ ಗೆ ಬೆಲ್ ನೀಡಲಾಗಿದೆ. ನ್ಯಾಯಾಧೀಶರು ಪಾಸ್ ಪೋರ್ಟ್ ಸರೆಂಡರ್ ಮಾಡುವಂತೆ ಷರತ್ತು ಹಾಕಲಾಗಿದೆ.