- ಅಭಿಮಾನಿಗಳಿಗಾಗಿ 4 ದಿನ ಭರ್ಜರಿ ಕೊಡುಗೆ
- ಟಿಕೆಟ್ ದರದಲ್ಲಿ ಭಾರೀ ಕಡಿಮೆ: ಸಂತಸದ ಸುದ್ದಿ
- ನ.7ರಿಂದ 4 ದಿನ ಟಿಕೆಟ್ ದರ ಕಡಿತಕ್ಕೆ ನಿರ್ಧಾರ
NAMMUR EXPRESS NEWS
ಬೆಂಗಳೂರು: ಕರ್ನಾಟಕ ರತ್ನ, ಪವರ್ ಸ್ಟಾರ್,ಡಾ. ಪುನೀತ್ ರಾಜ್ಕುಮಾರ್ ಅಭಿನಯದ ‘ಗಂಧದಗುಡಿ’ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ನಾಡಿನ ಪ್ರಕೃತಿ ಸೌಂದರ್ಯವನ್ನು ಪ್ರಾಣಿ ಸಂಕುಲವನ್ನು, ಅಪರೂಪದ ಸಸ್ಯ ಸಂಪತ್ತನ್ನು ವಿಶ್ವಕ್ಕೆ ತೋರಿಸುವ ಕೆಲಸವನ್ನು ಪುನೀತ್ ಮಾಡಿದ್ದಾರೆ. ಸುಮಾರು ಒಂದೂವರೆ ಗಂಟೆಗಳ ಡಾಕ್ಯುಮೆಂಟರಿಯಲ್ಲಿ ರಾಜ್ಯದ ಅಪರೂಪದ ಪ್ರಾಣಿ ಸಂಕುಲ, ಜಲಚರ, ಬೆಟ್ಟ ಗುಡ್ಡ ನದಿ, ಸಮುದ್ರಗಳ ಸೌಂದರ್ಯವನ್ನು ಅಪ್ಪು ತೋರಿಸಿದ್ದಾರೆ. ಅಪ್ಪು ಅಭಿಮಾನಿಗಳು, ಸಿನಿ ಪ್ರಿಯರು, ಪರಿಸರ ಪ್ರಿಯರು ಈ ಸಿನಿಮಾ ನೋಡಿ ಶಹಬ್ಬಾಶ್ ಎಂದಿದ್ದಾರೆ. ಇದೀಗ ಅಭಿಮಾನಿಗಳಿಗೆ ಪುನೀತ್ ರಾಜ್ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಸಂತಸದ ಸುದ್ದಿಯೊಂದು ಕೊಟ್ಟಿದೆ. ನವೆಂಬರ್ 7ರಿಂದ ನಾಲ್ಕು ದಿನಗಳ ಕಾಲ ಗಂಧದಗುಡಿ ಸಿನಿಮಾ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ. ಈ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕೂಮಾರ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ.
ಪ್ರತಿಯೊಬ್ಬ ಅಪ್ಪು ಅಭಿಮಾನಿಗಳು ಗಂಧದಗುಡಿ ನೋಡಬೇಕು ಅಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕಾಗಿ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಟೀನ್ ಥಿಯೇಟರ್ಗಳಲ್ಲಿ ಗಂಧದಗುಡಿ ಟಿಕೆಟ್ ದರವನ್ನು ಇಳಿಕೆ ಮಾಡಲಿದಿದ್ದಾರೆ. ನಾಲ್ಕು ದಿನಗಳು ಗಂಧದಗುಡಿ ಟಿಕೆಟ್ ಬೆಲೆ ಅರ್ಧಕ್ಕರ್ಧ ಇಳಿಕೆ ಮಾಡಲಾಗಿದೆ.
ಗಂಧದಗುಡಿ ಚಿತ್ರದ ಟಿಕೆಟ್ ದರ ಇಳಿಸಲು ನಿರ್ಧಾರ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಈ ಬಗ್ಗೆ ಸಿನಿಮಾದ ವಿತರಕರು ಹಾಗೂ ಪ್ರದರ್ಶಕರ ಜೊತೆ ಚರ್ಚಿಸಿದ್ದಾರೆ. ಬಳಿಕ ಟಿಕೆಟ್ ದರ ಇಳಿಕೆ ವಿಚಾರ ಕುರಿತಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕೈಗೊಂಡ ನಿರ್ಧಾರದಂತೆ ಟಿಕೆಟ್ ಬೆಲೆ ಇಳಿಕೆ ಮಾಡಲಾಗಿದೆ. ಅದರ ಅನ್ವಯ ಸಿಂಗಲ್ ಸ್ಟೀನ್ ಚಿತ್ರಮಂದಿರಗಳಲ್ಲಿ ಗಂಧದಗುಡಿ ಟಿಕೆಟ್ ದರ 57 ರೂಪಾಯಿ ಆಗಲಿದೆ, ಅತ್ತ ಮಲ್ಟಿಪ್ಲೆಕ್ಸ್ಗಳಲ್ಲಿ112 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ರಾಜ್ಯಾದ್ಯಂತ 4 ದಿನಗಳ ಕಾಲ ಈ ದರ ಅನ್ವಯ ಆಗಲಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದರ್ಶನ
ಶಾಲಾ ವಿದ್ಯಾರ್ಥಿಗಳಿಗೆ ಗಂಧದ ಗುಡಿ ಸಿನಿಮಾ ತೋರಿಸಲಾಗಿದೆ. 220 ಜನ ವಿದ್ಯಾರ್ಥಿಗಳು ಗಂಧದಗುಡಿ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ‘ಗಂಧದಗುಡಿ’ ಸಿನಿಮಾವನ್ನು ಮಕ್ಕಳಿಗೆ ಉಚಿತವಾಗಿ ತೋರಿಸಿದ್ದಾರೆ. ಅಪ್ಪು ಯುವಸೇನೆ ಬನಶಂಕರಿಯ ಅಭಿಮಾನಿ ಬಳಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಸುಮಾರು 220 ಸರ್ಕಾರಿ ಶಾಲೆಯ ಮಕ್ಕಳು ಉಚಿತವಾಗಿ ಸಿನಿಮಾ ವೀಕ್ಷಿಸಿದ್ದಾರೆ.
ಕೊಪ್ಪಳದಲ್ಲೂ ಸಿನಿಮಾ ನೋಡಿದ ವಿದ್ಯಾರ್ಥಿಗಳು
ಕೊಪ್ಪಳ ಜಿಲ್ಲೆಯ ಭತ್ತದ ಕಣಜ ಎಂದು ಕರೆಯಲ್ಪಡುವ ಕಾರಟಗಿ ಪಟ್ಟಣದಲ್ಲಿ ಇರುವ ಅವರ ಅಭಿಮಾನಿಗಳು ಲಕ್ಷ್ಮೀ ಚಿತ್ರಮಂದಿರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗಂಧದಗುಡಿ ಚಿತ್ರವನ್ನು ಉಚಿತ ಪ್ರದರ್ಶನ ಏರ್ಪಡಿಸಿದ್ದರು.
ಅಶೋಕ್ ಕಶ್ಯಪ್ ಅವರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನ
ಬೆಂಗಳೂರು:ಖ್ಯಾತ ಸಿನಿಮಾ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗಿ ಕರ್ನಾಟಕ ಸರ್ಕಾರವು ನೇಮಿಸಿದೆ.
ಸೋಮವಾರ ಸಂಜೆ 4 ಗಂಟೆಗೆ ನಂದಿನಿ ಲೇಔಟ್ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಖ್ಯಾತ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿರುವ ಅಶೋಕ್ ಈ ಹಿಂದೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.