- ಶಿವಮೊಗ್ಗದಲ್ಲಿ ಗಾಲ್ಫ್ ಆಡಿದ ನಟಿ
ಸಿನಿಮಾ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್.ಇನ್
ಬಾಲಿವುಡ್ ಬ್ಯೂಟಿ, ಶ್ರೀಲಂಕಾ ಮೂಲದ ಚೆಲುವೆ ಜಾಕ್ವೆಲಿನ್ ಫನಾರ್ಂಡಿಸ್ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಎರಡು ದಿನಗಳಿಂದ ಶಿವಮೊಗ್ಗದಲ್ಲೇ ಇದ್ದಾರೆ. ಜ.15ರಂದು ಶಿವಮೊಗ್ಗದ ಕಿಮ್ಮನೆ ಜಯರಾಂ ಮಾಲಿಕತ್ವದ ಐಷಾರಾಮಿ ಗಾಲ್ಫ್ ರೆಸಾರ್ಟ್ವೊಂದರಲ್ಲಿ ಅವರು ತಂಗಿದ್ದು, ಗಾಲ್ಫ್ ಆಟವನ್ನು ಆಡಿದ್ದಾರೆ. ತಾವು ಗಾಲ್ಫ್ ಆಡುತ್ತಿರುವ photoಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ಆ photoಗಳಿಗೆ ಲಕ್ಷಾಂತರ ಲೈಕ್ಸ್ ಸಿಕ್ಕಿವೆ. ಈ ನಡುವೆ ಜಾಕ್ವಲಿನ್ ಭೇಟಿ ಸಿನಿಮಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸುದೀಪ್ ಅಭಿನಯದ “ಫ್ಯಾಂಟಮ್” ಚಿತ್ರದ ವಿಶೇಷ ಹಾಡಿಗೆ ಬಿಗ್ ಸ್ಟಾರ್ ಬೇಕಾಗಿದ್ದು, ಏಪ್ರಿಲ್ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಆರಂಭದಲ್ಲಿ ಕತ್ರಿನಾ ಕೈಫ್ ಈ ಹಾಡಿನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಅವರ ಡೇಟ್ಸ್ ಹೊಂದಾಣಿಕೆ ಆಗದೇ ಇದ್ದರೆ, ನೋರಾ ಫತೇಹಿ ಅವರಿಂದ ಡ್ಯಾನ್ಸ್ ಮಾಡಿಸುವ ಯೋಜನೆ ಹಾಕಿಕೊಂಡಿತ್ತು ತಂಡ. ಈಗ ಅಂತಿಮವಾಗಿ ಜಾಕ್ ಹೆಸರು ಕೇಳಿಬಂದಿದೆ. ಈ ನಡುವೆ ಅವರ ಕರ್ನಾಟಕ ಭೇಟಿ ಈಗ ಮತ್ತೆ ಕುತೂಹಲ ಮೂಡಿಸಿದೆ.