ಕಾಟೇರ ಹೌಸ್ಫುಲ್.. ಹೌಸ್ಫುಲ್..!
– ತಮಿಳುನಾಡು, ಗೋವಾದಲ್ಲೂ ಕಾಟೇರನ ಕಿಚ್ಚು
– ಹಳ್ಳಿ, ರೈತರ ನೋವು ನಲಿವಿನ ಕಥೆಗೆ ಸಕ್ಕತ್ ರೆಸ್ಪಾನ್ಸ್
– 3ನೇ ದಿನಕ್ಕೆ 50 ಕೋಟಿ ಬಾಚುತ್ತಾ ಸಿನಿಮಾ
NAMMUR EXPRESS NEWS
ಹೊಸ ವರ್ಷಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರನಾಗಿ ಬಂದು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ್ದಾರೆ. ಸಿನಿಮಾ ರಾಜ್ಯಾದ್ಯಂತ ತೆರೆಗಪ್ಪಳಿಸಿ ಸಂಚಲನ ಸೃಷ್ಟಿಸಿದೆ. ಕೊಟಿ ಕೋಟಿ ಕೊಳ್ಳೆ ಹೊಡೆದು ಹುಬ್ಬೇರಿಸಿದೆ. ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ. ಹೊಸ ವರ್ಷ ಹಿನ್ನೆಲೆ ಜನ ಸಿನಿಮಾ ಮಂದಿರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕರ್ನಾಟಕದ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಕೆಲವೆಡೆ ಸಿನಿಮಾ ಬಿಡುಗಡೆಯಾಗಿದೆ. ಈ ವರ್ಷ ಕನ್ನಡ ಚಿತ್ರರಂಗ ಪ್ರೇಕ್ಷಕರ ಬರ ಎದುರಿಸುತ್ತಿತ್ತು. ‘ಕಾಟೇರ’ ಸಿನಿಮಾ ಬಂದು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಥಿಯೇಟರ್ಗೆ ಬರುವಂತಾಗಿದೆ. ಸೆಕೆಂಡ್ ಶೋಗಳು ಕೂಡ ಹೌಸ್ಫುಲ್ ಆಗುತ್ತಿದೆ. ತರುಣ್ ಟೇಕಿಂಗ್, ದರ್ಶನ್ ಪರ್ಫಾರ್ಮನ್ಸ್, ಡೈಲಾಗ್ಸ್ ಎಲ್ಲವೂ ಸಿನಿಮಾ ಸಿನಿಮಾ ತೆರೆಮೇಲೆ ಜಾದೂ ಮಾಡಿದೆ. 3 ಗಂಟೆಯ ಸುದೀರ್ಘ ಚಿತ್ರವನ್ನು ಕೂಡ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.
70ರ ಕಾಲಘಟ್ಟದ ಕಥೆ, ಉಳುವವನೆ ಭೂಮಿಕ ಒಡೆಯ ಕಾಯ್ದೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟದ ಕಥೆ ಪ್ರೇಕ್ಷಕರ ಮನಗೆದ್ದಿದೆ. ದರ್ಶನ್ ಇತ್ತೀಚೆಗೆ ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಒಂದೊಳ್ಳೆ ಸಂದೇಶ ಇರುವ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ‘ಯಜಮಾನ’ ಚಿತ್ರದಲ್ಲಿ ಎಣ್ಣೆ ಗಾಣ, ‘ಕ್ರಾಂತಿ’ ಚಿತ್ರದಲ್ಲಿ ಸರ್ಕಾರಿ ಶಾಲೆಗಳ ಕಥೆ ಇತ್ತು. ‘ಕಾಟೇರ’ ಚಿತ್ರದಲ್ಲಿ ಹಳ್ಳಿಗಳ, ರೈತರ ನೋವು ನಲಿವಿನ ಕಥೆ ಇದೆ. ಉಳ್ಳವರ, ಇಲ್ಲದವರ ನಡುವಿನ ಸಂಘರ್ಷವಿದೆ. ‘ಕಾಟೇರ’ ಸಿನಿಮಾ ಎಲ್ಲಾ ವಿಭಾಗಗಳಲ್ಲೂ ಬೆಸ್ಟ್ ಎನಿಸಿಕೊಂಡಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಪಕ್ಕಕ್ಕಿಟ್ಟರೆ ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿ ರೂಪುಗೊಂಡಿದೆ. ಅದೇ ಕಾರಣಕ್ಕೆ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿಯಿಂದಲೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎರಡು ದಿನಕ್ಕೆ ಸಿನಿಮಾ 37 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡವೇ ಘೋಷಿಸಿದೆ. 3ನೇ ದಿನವೂ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.