- ಬೊಮ್ಮಾಯಿ ಅವರಿಗೆ ಬೆಂಬಲ ಕೊಡ್ತೇನೆ
- ನಾನು ರಾಜಕೀಯಕ್ಕೆ ಬರಲ್ಲ: ಸುದೀಪ್ ಸ್ಪಷ್ಟನೆ
- ನನಗೆ ಸಹಾಯ ಮಾಡಿದವರ ಪರ ಪ್ರಚಾರ ಮಾಡ್ತೇನೆ
NAMMUR EXPRESS NEWS
ಬೆಂಗಳೂರು : ನಾನು ಚಿಕ್ಕ ವಯಸ್ಸಿನಿಂದಲೂ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ನೋಡಿಕೊಂಡು ಬಂದಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ಕೆಲವೇ ಕೆಲವು ಜನರು ನನ್ನ ಜೊತೆಗೆ ನಿಂತಿದ್ದರು. ಅದರಲ್ಲಿ ಒಬ್ಬರು ನನ್ನ ಬಸವರಾಜ್ ಬೊಮ್ಮಾಯಿ ಮಾಮ. ನನ್ನ ನಿಲುವು ಅಂತಾ ಅಲ್ಲಾ ನಾನು ನಿಮ್ಮಜೊತೆಗೆ ನಿಲ್ಲುತ್ತೇನೆ ಎಂದು ಹೇಳಲು ಬಂದಿದ್ದೇನೆ. ಕೆಲವು ವ್ಯಕ್ತಿಗಳು ನನಗೆ ಸಹಕಾರ ಮಾಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ನಾನು ಪಕ್ಷದ ಪರ ನಿಂತಿಲ್ಲ ಬದಲಾಗಿ ವ್ಯಕ್ತಿಯ ಪರ ನಿಲ್ಲುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.
ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ನಟ ಸುದೀಪ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಪಕ್ಷ ನನ್ನನ್ನು ಕರೆದಿಲ್ಲ ಬೊಮ್ಮಾಯಿ ಅವರು ಬೆಂಬಲ ಕೋರಿದ್ದಾರೆ. ಹೀಗಾಗಿ ನಾನು ಅವರನ್ನು ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ. ನಾನು ರಾಜಕೀಯಕ್ಕೆ ಬಂದಿಲ್ಲ. ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲವಿದೆ, ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಆದರೆ ಯಾರಿಗೆ ನನ್ನ ಅಗತ್ಯವಿದೆಯೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ಬೇರೆ ಪಕ್ಷದಲ್ಲಿ ಇದ್ದವರು ಯಾರಾದರೂ ನನ್ನ ಕಷ್ಟಕ್ಕೆ ನೆರವಾಗಿದ್ದವರು ಯಾರಾದರೂ ಇದ್ದರೆ ಖಂಡಿತವಾಗಿಯೂ ನಾನು ಅವರ ಪರವಾಗಿಯೂ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
Vote : ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?
ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸಲಾರೆ!
ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅನಿವಾರ್ಯ ಕಾರಣಗಳಿಗೆ ನಾನು ನಿಲ್ಲುವುದಿಲ್ಲ. ನಾನು ಚುನಾವಣೆಗೆ ನಿಲ್ಲ ಬೇಕಾದ್ರೆ ಖಂಡಿತವಾಗಿಯೂ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತೇನೆ. ನಾನು ಸಿನಿಮಾ ಬಿಟ್ಟು ರಾಜಕೀಯ ಮಾಡುವುದಿಲ್ಲ. ಬೊಮ್ಮಾಯಿ ಅವರಿಗೆ ಶೇ.100 ರಷ್ಟು ಬೆಂಬಲ ನೀಡುತ್ತೇನೆ. ದುಡ್ಡು ಪಡೆದು ಪ್ರಚಾರ ಮಾಡುವ ಅನಿವಾರ್ಯತೆ ನನಗೆ ಇಲ್ಲ ಎಂದಿದ್ದಾರೆ.
ಸುದೀಪ್ ಅವರ ರಾಜಕೀಯಕ್ಕೆ ಬಂದಿಲ್ಲ. ಸುದೀಪ್ ನನ್ನ ಆತ್ಮೀಯರು, ಅವರು ನನಗೆ ಬೆಂಬಲ ನೀಡುತ್ತಿದ್ದಾರೆ. ನನ್ನ ಪಕ್ಷ ಸೇರ್ಪಡೆಯಾಗದೇ ಇದ್ದರೂ ಕೂಡ ನಮ್ಮಪರ ಪ್ರಚಾರ ಮಾಡಬೇಕು ಎಂದು ಕೇಳಿಕೊಂಡಿದ್ದೇನೆ. ಇದಕ್ಕೆ ಸುದೀಪ್ ಅವರು ನಾನು ಪಕ್ಷದ ಜೊತೆಗಲ್ಲ ನಿಮ್ಮ ಜೊತೆಯಲ್ಲಿ ನಾನು ಸದಾ ಜೊತೆಯಲ್ಲೇ ಇರುತ್ತೇನೆ ಎಂದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸುದೀಪ್ ಅವರು ನನ್ನ ಪರವಾಗಿ ಮಾತ್ರವಲ್ಲ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.