ಮಲೆನಾಡಿನ ಮೀನು ಬೇಟೆ ಈಗ ಸಿನಿಮಾ!
– ತೀರ್ಥಹಳ್ಳಿ ಮೂಲದ ಗೌರಿಶಂಕರ್ ನಾಯಕರಾಗಿ ನಟನೆ
– ಪೋಸ್ಟರ್ ಬಿಡುಗಡೆ: ಸಿನಿಮಾ ಬಗ್ಗೆ ಒಳ್ಳೆ ಸ್ಪಂದನೆ
NAMMUR EXPRESS NEWS
ಸ್ಯಾಂಡಲ್ ವುಡ್ ನಲ್ಲಿ ಬೇಟೆ ಕಥೆಯ ಸಿನಿಮಾಗಳು ಬಂದಿವೆ. ಇದೀಗ ಕೆರೆಬೇಟೆ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ತೀರ್ಥಹಳ್ಳಿ ಮೂಲದ ಗೌರಿಶಂಕರ್ ನಾಯಕರಾಗಿ ನಟಿಸಿದ್ದಾರೆ. ಗೌರಿಶಂಕರ್ ಈ ಹಿಂದೆ ‘ಜೋಕಾಲಿ’ ಮತ್ತು ‘ರಾಜಹಂಸ’ ಎಂಬ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದರು. ಆ ಎರಡೂ ಸಿನಿಮಾಗಳಲ್ಲಿ ಅವರ ನಟನೆ ಬಗ್ಗೆ ಉತ್ತಮ ಮಾತುಗಳು ಕೇಳಿ ಬಂದಿದ್ದವು. ಈಗ ಬಹಳ ದಿನಗಳ ನಂತರ ಅವರು ತೆರೆಮೇಲೆ ಬರುತ್ತಿದ್ದು, ಅದು ಸಹ ‘ಕೆರೆಬೇಟೆಯಂತಹ ಸಿನಿಮಾದ ಮೂಲಕ ಎಂಬುದು ವಿಶೇಷ ಈ ಸಿನಿಮಾಗೆ ರಾಜ್ ಗುರು ಎಂಬವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜ್ಗುರು ಕಳೆದ ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ಎ.ಆರ್. ಬಾಬು, ಒಡೆಯರ್ ಹಾಗೂ ಇತರೆ ನಿರ್ದೇಶಕರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದವರು, ‘ಕೆರೆಬೇಟೆ’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಕೆರೆಬೇಟೆ’ ಎಂದರೇನು?:
‘ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ, ಮಲೆನಾಡಿನಲ್ಲಿ ವರ್ಷಕ್ಕೊಮ್ಮೆ ‘ಕೆರೆಬೇಟೆಯಾಡುತ್ತಾರೆ. ತುಂಬಾ ವಿಸ್ತಾರವಾದ ಮತ್ತು ದೊಡ್ಡ ಕೆರೆಗಳಲ್ಲಿ ಹತ್ತಾರು ಮಂದಿ ಒಟ್ಟಿಗೆ ವಿಶೇಷವಾದ ಮೀನು ಹಿಡಿಯುವ ಬುಟ್ಟಿ ಹಿಡಿದು ಕೆರೆಗೆ ಇಳಿದು ಮೀನು ಹಿಡಿಯುತ್ತಾರೆ. ಅದನ್ನು “ಕೆರೆಬೇಟೆ’ ಎನ್ನುತ್ತಾರೆ. ಇದೇ ಈ ಸಿನಿಮಾದ ಮುಖ್ಯ ಎಳೆ, ಅವಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬಿಝಿಯಾಗಿದೆ. ಈ ನಡುವೆ ಸಿನಿಮಾ ತಂಡ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈಗಾಗಲೇ ಪೋಸ್ಟರ್ ಕೆರೆ ಬೇಟೆ ಕಥೆ ಬಹಳ ವಿಶೇಷವಾಗಿದೆ.
‘ಕೆರೆ ಬೇಟೆ’ ಕಥೆಯ ಸುತ್ತ ಈ ಸಿನಿಮಾ ನಡೆಯಲಿದ್ದು, ಅದರ ಜತೆಗೆ ಮಲೆನಾಡಿನ ಹಳ್ಳಿಯ ಜನರ ಬದುಕನ್ನು ಇದರಲ್ಲಿ ತೋರಿಸಲಿದ್ದೇವೆ. ಸಿನಿಮಾ ಬಹಳ ನ್ಯಾಚುರಲ್ ಆಗಿ ಮೂಡಿ ಬಂದಿದ್ದು, ಈ ಬಾರಿ ವಿಶೇಷವಾದ ಕಥೆಯೊಂದಿಗೆ ನಾನು ತೆರೆಮೇಲೆ ಬರುತ್ತಿದ್ದೇನೆ’ ಎಂದಿದ್ದಾರೆ ನಟ ಗೌರಿಶಂಕರ್. ಈ ಸಿನಿಮಾವನ್ನು ಸಂಪೂರ್ಣವಾಗಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಹಾಗೂ ಸೊರಬ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.