ರಕ್ಷಿತ್ ತೀರ್ಥಹಳ್ಳಿ ಅವರಿಗೆ ರಾಷ್ಟ್ರ ಮಟ್ಟದ ಗೌರವ!
– ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ
– ಮಲೆನಾಡ ಅನೇಕ ಕಲಾವಿದರ ನಟನೆ
NAMMUR EXPRESS NEWS
ಬೆಂಗಳೂರು: ಯುವ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಹದಿನಾಲ್ಕನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ Honorable Jury Mention Award ದೊರೆತಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರ ತಂಡ ಪ್ರಶಸ್ತಿ ಸ್ವೀಕರಿಸಿತು. ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಬರೆದ ‘ಕಾಡಿನ ನೆಂಟರು’ ಪುಸ್ತಕ ಆಧರಿಸಿದ ಕಥೆ ತಿಮ್ಮನ ಮೊಟ್ಟೆಗಳು (Timmana Mottegalu) . ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಮಾಸ್ಟರ್ ಹರ್ಷ, ರಾಮಣ್ಣ ರಘು ರಾಮನಕೊಪ್ಪ ಸೇರಿದಂತೆ ಹಲವಾರು ನಟರು ತಾರಾಗಣದಲ್ಲಿ ಇದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಳಿಂಗ ಸರ್ಪದ ಬಗ್ಗೆ ವಿಶೇಷ ಮಾಹಿತಿ ಕೂಡ ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ