ಮಲೆನಾಡಿಗೆ ಬಂದ ಮಳೆ ಹುಡುಗಿ…!
– ಕುಪ್ಪಳಿಗೆ ಭೇಟಿ ನೀಡಿದ ಪೂಜಾ ಗಾಂಧಿ ದಂಪತಿ
– ಮಂತ್ರ ಮಾಂಗಲ್ಯ ಮದುವೆಯಾಗಿದ್ದ ಪೂಜಾ ಗಾಂಧಿ
NAMMUR EXPRESS NEWS
ತೀರ್ಥಹಳ್ಳಿ : ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಕನ್ನಡದ ಖ್ಯಾತ ನಟಿ ಪೂಜಾ ಗಾಂಧಿ ಪತಿಯೊಂದಿಗೆ ಮಂಗಳವಾರ ಕುಪ್ಪಳಿಗೆ ಆಗಮಿಸಿ ರಾಷ್ಟ್ರಕವಿ ಜನಿಸಿದ ಹಿರೇಕೊಡಿಗೆ ಸೇರಿದಂತೆ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದರು. ಪತಿ ವಿಜಯ್ ರಾಥೋಡ್ ಅವರೊಂದಿಗೆ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ದೇವಂಗಿ ಮನೆ ಮತ್ತು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಮನೆಗಳಿಗೆ ಭೇಟಿ ನೀಡಿ, ಅವರ ಆತಿಥ್ಯ ಸ್ವೀಕರಿಸಿದರು.
ಮಂತ್ರ ಮಾಂಗಲ್ಯ ಪದ್ಧತಿಯಂತೆ ಕುಪ್ಪಳಿಯಲ್ಲಿ ಮದುವೆಯಾಗಲು ಬಯಸಿದ್ದ ಪೂಜಾ ಗಾಂಧಿ, ಅವರ ತಾಯಿ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿ ನಲ್ಲಿಯೇ ಮಂತ್ರ ಮಾಂಗಲ್ಯದಂತೆ ವಿವಾಹವಾಗಿದ್ದರು. ಈ ವಿವಾಹವನ್ನು ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೇತೃತ್ವದಲ್ಲಿ ಚಿತ್ರ ಸಾಹಿತಿ ಕವಿರಾಜ್ ಅವರು ನಡೆಸಿಕೊಟ್ಟಿದ್ದರು.