ಸಿನಿಮಾ ಎಕ್ಸ್ ಪ್ರೆಸ್
- ಸರ್ಕಾರಿ ಶಾಲೆಗಳ ಬಗ್ಗೆ ಚೆಲ್ಲಿದ ಕನ್ನಡ ಸಿನಿಮಾ
- ರಾಜ್ಯದ ಬಹುತೇಕ ಉತ್ತಮ ರೆಸ್ಪಾನ್ಸ್
NAMMUR EXPRESS NEWS
ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳು ನಡುವಿನ ವ್ಯತ್ಯಾಸವನ್ನು ಕಥಾಹೂರಣವನ್ನಾಗಿಸಿಕೊಂಡು ಹಲವಾರು ಸಿನಿಮಾಗಳು ಕನ್ನಡ ಸಿನಿಪರದೆಯಲ್ಲಿ ತೆರೆ ಕಂಡಿವೆ. ಇದೀಗ ಇದೇ ಕಥಾಹಂದರವಿರುವ ʼಪ್ರವೀಣಾʼ ಸಿನಿಮಾ ಏಪ್ರಿಲ್ 7ಕ್ಕೆ ತೆರೆಕಂಡಿದ್ದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಈ ಸಿನಿಮಾಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹೇಶ್ ಸಿಂದುವಳ್ಳಿ ಈ ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ನಾನು ʼ10ನೇ ತರಗತಿʼ ಸಿನಿಮಾ ಮಾಡಿದ್ದು,ಇದು ನನ್ನ ಎರಡನೇ ಪ್ರಯತ್ನ. ನಾನು ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ,ಕಾಸರಗೋಡುʼ ಸಿನಿಮಾ ಮಾಡುವಾಗ ಈ ತರಹ ಒಂದು ಲೈನ್ ಹೊಳೆಯಿತು. ನನ್ನ ಲೈಫ್ ನಲ್ಲಿ ಆದಂತ ಒಂದಿಷ್ಟು ಘಟನೆಗಳನ್ನು ಇಟ್ಟುಕೊಂಡು ಎಲ್ಲರಿಗೂ ಬೇಕಾಗಿರುವ ಸಿನಿಮಾ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಪ್ರವೀಣಾ ಚಿತ್ರವನ್ನು ನಿರ್ಮಾಣ ಮಾಡಿರುವ ನಟ ಜಗದೀಶ್ ಕೆ.ಆರ್ ಮಾತನಾಡಿ, ಪ್ರವೀಣಾ ಚಿತ್ರವು ನನ್ನ ಚೊಚ್ಚಲ ನಿರ್ಮಾಣವಾಗಿದ್ದು, ಮನರಂಜನೆಯ ಜೊತೆಗೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹಾಗೂ ಖಾಸಗಿ ಶಾಲೆಗಳ ದಬ್ಬಾಳಿಕೆಯನ್ನು ಬಿಂಬಿಸುವ ಪ್ರಯತ್ನದಲ್ಲಿದೆ ಎಂದಿದ್ದಾರೆ.
ಸರ್ಕಾರಿ ಶಾಲೆಯ ಹುಡುಗ ಖಾಸಗಿ ಶಾಲೆಗೆ ಹೋದಾಗ ಏನೆಲ್ಲ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಜೀವನ ಚಿತ್ರಣ ಕಥೆಯಲ್ಲಿ ಮೂಡಿಬಂದಿದೆ.
ಹಿರಿಯ ನಟ ಮಂಡ್ಯ ರಮೇಶ್ ಚಿತ್ರದ ಬಗ್ಗೆ ಮಾತನಾಡಿ, ಇದೊಂದು ಸದಭಿರುಚಿಯ ಸಿನಿಮಾ ಎನ್ನಬಹುದು, ಕಥೆ ಚೆನ್ನಾಗಿದ್ದು ನಾನಿಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಪಾತ್ರ ಮಾಡಿದ್ದೇನೆ, ಪಾತ್ರ ವಿಶೇಷವಾಗಿದೆ ಜೊತೆಗೆ ಕಥೆಯ ಎಳೆ ತುಂಬಾ ಚೆನ್ನಾಗಿದೆ. ತಂಡ ಚೆನ್ನಾಗಿ ಕೆಲಸ ಮಾಡಿದ್ದು ಚಿತ್ರವನ್ನು ಮಂಡ್ಯ, ಮೈಸೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ “ಎಂದು ಮಾಹಿತಿ ಹಂಚಿಕೊಂಡರು.
ಮಕ್ಕಳ ಚಿತ್ರವಾದ ಇದರಲ್ಲಿ ಮುಖ್ಯ ಪಾತ್ರ ಮಾಡಿರುವ ಶಶಿ ”ಈ ಸಿನಿಮಾದಲ್ಲಿ ನಾನು ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ಹೋದಾಗ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಪಡುವ ಹುಡುಗನ ಪಾತ್ರ ಮಾಡಿದ್ದೇನೆ” ಎನ್ನುತ್ತಾರೆ.
ರಂಗಭೂಮಿ ನಟಿ ವನಿತ ರಾಜೇಶ್ ಇದರಲ್ಲಿ ಪ್ರವೀಣನ ತಾಯಿ ಪಾತ್ರ ಮಾಡಿದ್ದು, ಒಬ್ಬ ವಿಧವೆ ತಾಯಿ ಮಗನನ್ನು ಹೇಗೆ ಬೆಳೆಸುತ್ತಾಳೆ ಎಂಬುದನ್ನು ಚಿತ್ರಿಸಲಾಗಿದೆ. ಈ ಮಕ್ಕಳ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ.
ನಿನಗಾಗಿʼ ಚಿತ್ರಖ್ಯಾತಿಯ ವೀರು ಸಾಹಿತ್ಯ-ಸಂಗೀತವಿರುವ ಈ ಚಿತ್ರಕ್ಕೆ ಸುರೇಶ್ ಡಿ.ಆರ್ ಸಂಕಲನ, ಮನೋಜ್ ಸಿ.ಎನ್ ಛಾಯಾಗ್ರಹಣವಿದೆ. ಚಿತ್ರದ ತಾರಾಗಣದಲ್ಲಿ ಮಂಡ್ಯ ರಮೇಶ್ ,ಮಾಸ್ಟರ್ ರೋಹಿತ್, ಶಶಿ ಗೌಡ, ಐಶ್ವರ್ಯ ಗೌಡ, ಮನು, ಗಗನ ಲಾಡ್, ಪುನೀತ್, ಸ್ನೇಹ ಗೌಡ ಮೈಸೂರು, ನಾಗರತ್ನ ಮುಂತಾದವರ ದೊಡ್ಡ ಬಳಗವೇ ಇದೆ.