ಪ್ರೇಕ್ಷಕನ ಮನ ಗೆಲ್ಲಲು ಶಾಖಾಹಾರಿ ಸಿನಿಮಾ ಸಜ್ಜು
– ಫೆ.16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ
– ತೀರ್ಥಹಳ್ಳಿಯ ಸುತ್ತಮುತ್ತ ಚಿತ್ರೀಕರಣ
– ಚಂದನ ವನದ ಹೊಸ ಭರವಸೆ
– ಪ್ರಮುಖ ಪಾತ್ರಗಳಲ್ಲಿ ಶಿವಮೊಗ್ಗ, ತೀರ್ಥಹಳ್ಳಿ ಕಲಾವಿದರು!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದವರೇ ಪ್ರಮುಖವಾಗಿರುವ ಹೊಸ ಭರವಸೆ ಮೂಡಿಸಿರುವ ಶಾಖಾಹಾರಿ ಸಿನಿಮಾ ಫೆ.16ರಂದು ತೆರೆ ಕಾಣಲಿದೆ. ಶಿವಮೊಗ್ಗದವರೇ ಆದ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಮಾಹಿತಿ ನೀಡಿ, ಶಾಖಾಹಾರಿ ಚಿತ್ರವು ಒಂದು ಭರವಸೆ ಮೂಡಿಸುವ ಚಿತ್ರವಾಗಿದೆ. ಶಿವಮೊಗ್ಗದವರೇ ಆದ ರಂಗ ಕಲಾವಿದ ಎಸ್.ಆರ್. ಗಿರೀಶ್ರವರ ನಾಟಕದ ತುಣುಕೊಂದನ್ನು ಇಟ್ಟುಕೊಂಡು ಅದನ್ನು ವಿಸ್ತರಿಸಿ ಅದಕ್ಕೊಂದು ರೂಪ ಕೊಟ್ಟು, ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಲಾಗಿದೆ. ಫೆ.16ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದರು. ಇದೊಂದು ತಂಡದ ಶ್ರಮವಾಗಿದೆ. ಸಿನಿಮಾ ತಯಾರಾಗುವವರೆಗು ಅದೊಂದು ಆರ್ಟ್ ಆಮೇಲೆ ಅದು ಪ್ರಾಡಕ್ಟ್ ನಂತರ ಮಾರ್ಕೇಟಿಂಗ್ ಹೀಗೆ ಎಲ್ಲಾ ವಿಷಯಗಳು ಇದರಲ್ಲಿ ನಡೆಯುತ್ತವೆ.
ಉತ್ತಮ ಹಾಡುಗಳು ಒಳ್ಳೆಯ ಪೋಟೋಗ್ರಫಿ ತಂತ್ರಜ್ಞಾನ ಈ ಚಿತ್ರದಲ್ಲಿ ಬಳಕೆಯಾಗಿದೆ. ಈ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿರುವವರು ಶಿವಮೊಗ್ಗದವರು ನಮ್ಮೂರಿನವರು ಎಂಬ ಹೆಮ್ಮೆ ನಮ್ಮದು ಎಂದರು. ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನಗಳ ಸುತ್ತ ಈ ಚಿತ್ರ ಸಾಗಿದೆ. ಕುತೂಹಲವಿದೆ ಒಳ್ಳೆಯ ಹಾಡುಗಳು ಇವೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯಂತವರು ಚಿತ್ರದಲ್ಲಿ ನಟಿಸಿದ್ದಾರೆ. ಕತೆಯೇ ಇದರ ನಾಯಕ. ಈ ಇಬ್ಬರು ಮಹಾ ನಟರ ಜೊತೆಗೆ ಸುಜಯ್ ಶಾಸ್ತ್ರಿ ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷಗೋಭಟ್ಟ, ನಿಧಿಹೆಗಡೆ ಮುಂತಾದವರು ಅಭಿನಯಿಸಿದ್ದಾರೆ ಎಂದರು.
ಇಬ್ಬರು ನಿರ್ಮಾಪಕರು
ನಿರ್ಮಾಪಕ ರಾಜೇಶ್ ಕೀಳಂಬಿ ಮಾತನಾಡಿ, ನನ್ನ ಜೊತೆಗೆ ರಂಜಿನಿ ಪ್ರಸನ್ನ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮಾಡುವುದೇ ಒಂದು ಅವಿಸ್ಮರಣೀಯ ಕ್ಷಣವಾಗಿದೆ. ಸಿನಿಮಾ ವೀಕ್ಷಕನಾದ ನಾನು ಚಿತ್ರಕ್ಕೆ ಬಂಡವಾಳ ಹೂಡುವಾಗ ಸಾಕಷ್ಟು ಯೋಜನೆ ಮಾಡಿದ್ದೇನೆ ಎಂದರು. ಪ್ರಮುಖವಾಗಿ ಬೆಂಗಳೂರು ಕೇಂದ್ರಿಕೃತವಾಗಿರುವ ಈ ಸಿನಿಮಾ ಉದ್ಯಮ ಬೇರೆ ಬೇರೆ ಜಿಲ್ಲೆಗಳತ್ತ ಸಾಗಬೇಕಾಗಿದೆ. ಶಿವಮೊಗ್ಗದಲ್ಲಿಯೂ ಸಹ ಅನೇಕ ಯುವಕರು ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹಾಗಾಗಿ ಶಿವಮೊಗ್ಗವು ಕೂಡ ಸಿನಿಮಾದ ಬ್ರ್ಯಾಂಚ್ ಆಫೀಸ್ ತರಹ ಹೆಸರಾಗಬೇಕು, ಹಲವರಿಗೆ ಉದ್ಯೋಗ ಸಿಗಬೇಕು, ಪ್ರತಿಭೆಗಳಿಗೆ ಅವಕಾಶವಾಗಬೇಕು. ಇಲ್ಲಿ ಬರಹಗಾರರಿದ್ದಾರೆ, ತಂತ್ರಜ್ಞರು ಇದ್ದಾರೆ, ಬಂಡವಾಳ ಹಾಕುವವರು ಇದ್ದಾರೆ. ಹಾಗಾಗಿ ಶಿವಮೊಗ್ಗ ಒಂದು ಸಿನಿಮಾ ಉದ್ಯಮದ ಕ್ಷೇತ್ರವಾಗಬೇಕು ಎಂದರು.
ನಟ ಗೋಪಾಲದೇಶ ಪಾಂಡೆ, ನಿರ್ಮಾಪಕಿ ರಂಜಿನಿ, ನಿರ್ದೇಶಕ ಸಂದೀಪ್ ತಂದೆ ಶಿವಮೂರ್ತಿ, ವಿನಯ್ ಸೇರಿದಂತೆ ಹಲವರಿದ್ದರು. ತೀರ್ಥಹಳ್ಳಿ ಹಾಗೂ ಮೇಳಿಗೆ ಗ್ರಾಮದಲ್ಲಿ ಚಿತ್ರೀಕರಣಗೊಂಡ ಈ ಸಿನೆಮಾದಲ್ಲಿ ಮಲೆನಾಡಿನ ಅನೇಕ ಕಲಾವಿದರು ನಟಿಸಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನರವರು ಕೀಳಂಬಿ ಮೀಡಿಯಾ ಲ್ಯಾಬ್ ಪ್ರೈ.ಲಿ. ನ ಅಡಿಯಲ್ಲಿ ಶಾಖಾಹಾರಿ ಚಿತ್ರವನ್ನು ನಿರ್ಮಿಸಿದ್ದಾರೆ. ಫೆಬ್ರವರಿ 16ಕ್ಕೆ ಕರ್ನಾಟಕದಾದ್ಯಂತ ಚಿತ್ರ ತೆರೆಕಾಣಲಿದ್ದು. ಕೆ ಆರ್ ಜಿ ಸಂಸ್ಥೆ ಚಿತ್ರ ವಿತರಣೆಯ ಜವಾಬ್ದಾರಿಯನ್ನು ಹೊಂದಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ರಂಗಾಯಣ ರಘು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೊಸತನದ ಈ ಹೊಸಬರ ಚಿತ್ರಕ್ಕೆ ಚಿತ್ರಕಥೆಯೇ ಜೀವಾಳವಾಗಿದೆ, ಮರ್ಡರ್ ಮಿಸ್ಟರಿ ಸಿನೆಮಾ ಇದಾಗಿದ್ದು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು.