ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ!
- ಸೈಮಾ ಅತ್ಯುತ್ತಮ ನಾಯಕ ನಟ ಪ್ರಶಸ್ತಿ
- 10ನೇ ವರ್ಷದ ಸೈಮಾ ಅವಾರ್ಡ್ ಕಾರ್ಯಕ್ರಮ ರಂಗು
NAMMUR EXPRESS NEWS
ಬೆಂಗಳೂರು: ನಟ ಪುನೀತ್ ರಾಜಕುಮಾರ್ ನಮ್ಮನ್ನು ಆಗಲಿ ಈಗ ಒಂದು ವರ್ಷವಾಗುತ್ತಾ ಬಂದಿದೆ. ಆದರೂ ಅವರ ನೆನಪು ಮಾಸಿಲ್ಲ. ಅವರ ಹೆಸರಲ್ಲಿ ಪ್ರತಿ ದಿನ ಒಂದಲ್ಲ ಒಂದು ಮಾನವೀಯ ಕೆಲಸ ನಡೆಯುತ್ತಿದೆ.
ಪುನೀತ್ ರಾಜ್ ಕುಮಾರ್ ಅವರಿಗೆ ಸೈಮಾ ಅತ್ಯುತ್ತಮ ನಾಯಕನಟ ಪ್ರಶಸ್ತಿ ದೊರೆತಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಶಿವರಾಜ್ ಕುಮಾರ್ ಹಾಡು ಹೇಳಿ ತಮ್ಮನಿಗೆ ನಮನ ಅರ್ಪಿಸಿದ್ದಾರೆ.
ಸೈಮಾ 2022 ಪ್ರಶಸ್ತಿ ಪ್ರಧಾನ ಅದ್ಧೂರಿ ಕಾರ್ಯಕ್ರಮವು ಬೆಂಗಳೂರಿನ ಯಶ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವೀ ಅವಾರ್ಡ್ಸ್’ 2012ರಿಂದ ಆರಂಭವಾಗಿದೆ. ಹೀಗಾಗಿ, ಸೈಮಾ ಈ ಬಾರಿ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. ಇದಕ್ಕಾಗಿಯೇ ಈ ವರ್ಷದ ಸೈಮಾ ಕಾರ್ಯಕ್ರಮವು ಬಹಳ ವಿಶೇಷವಾಗಿದೆ.
ಸೈಮಾ ಪ್ರಶಸ್ತಿ ಅಡಿಯಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರರಂಗದ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅತ್ಯುತ್ತಮ ಚಿತ್ರ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಒಟ್ಟು 19 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪ್ರತಿ ಬಾರಿಯೂ ಸೈಮಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಾರ್ಯಗತಗೊಳಿಸಲಾಗುತ್ತದೆ. ಈ ಬಾರಿಯೂ ಸೈಮಾ ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಕನ್ನಡಿಗರ ಪಾಲಿಗೆ ವಿಶೇಷವಾಗಿದೆ.
ಕನ್ನಡದಲ್ಲಿ ಪ್ರಶಸ್ತಿ ಯಾರಿಗೆ..?
ಸೈಮಾದಲ್ಲಿ 2021ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈ ವರ್ಷ ಪ್ರಶಸ್ತಿ ಪ್ರಧಾನ ಮಾಡುತ್ತಾರೆ. ಈ ಸಲ ಕನ್ನಡ ಸಿನಿರಂಗದಲ್ಲಿ 2021ರಲ್ಲಿ ತೆರೆಕಂಡ ತರುಣ್ ನಿರ್ದೇಶನದ ರಾರ್ಬಟ್ ಚಿತ್ರದ ಸುಧಾಕರ್ರವರ ಸಿನಿಮಾಟೋಗ್ರಫಿಗೆ “ಬೆಸ್ಟ್ ಸಿನಿಮಾಟೋಗ್ರಫಿ” ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಾಸುಕಿ ವೈಭವ್ರವರಿಗೆ “ನಿನ್ನ ಸನಿಹಕೆ” ಸಿನಿಮಾದ “ನೀ ಪರಿಚಯ.” ಹಾಡಿಗೆ “ಅತ್ಯುತ್ತಮ ಗೀತೆ ರಚನಕಾರ” ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸೈಮಾ 2022ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಈ ಕೆಳಗಿನಂತೆ ಪ್ರಶಸ್ತಿಗಳು ಲಭಿಸಿವೆ:
ಅತ್ಯುತ್ತಮ ನಟ : ಪುನೀತ್ ರಾಜ್ಕುಮಾರ್ (ಯುವರತ್ನ
ಅತ್ಯುತ್ತಮ ನಟಿ : ಆಶಿಕಾ ರಂಗನಾಥ್ (ಮದಗಜ)
ಅತ್ಯುತ್ತಮ ನಟಿ ಕ್ರಿಟಿಕ್ಸ್: ಅಮೃತಾ ಅಯ್ಯಂಗ (ಬಡವ ರಾಸ್ಕಲ್ )
ಅತ್ಯುತ್ತಮ ಹಾಸ್ಯನಟ : ಚಿಕ್ಕಣ್ಣ (ಪೊಗರು)
ಅತ್ಯುತ್ತಮ ನಿರ್ದೇಶನ : ತರುಣ್ ಸುಧೀರ್ (ರಾಬರ್ಟ್)
ಅತ್ಯುತ್ತಮ ಪೋಷಕನಟ : ಪ್ರಮೋದ್ (ರತ್ನನ್ ಪ್ರಪಂಚ)
ಅತ್ಯುತ್ತಮ ಪೋಷಕನಟಿ : ಆರೋಹಿ ನಾರಾಯಣ್
(ದೃಶ್ಯ 2)
ಅತ್ಯುತ್ತಮ ಹಿನ್ನಲೆ ಗಾಯಕಿ : ಚೈತ್ರಾ ಆಚಾರ್ (“ಗರುಡ)
ಗಮನ ವೃಷಭ ವಾಹನ” ಚಿತ್ರದ “ಸೋಜುಗಾದ
ಸೂಜುಮಲ್ಲಿಗೆ ಹಾಡು”)
ಅತ್ಯುತ್ತಮ ಸಂಗೀತ ನಿರ್ದೇಶಕ : ಅರ್ಜುನ್ ಜನ್ಯ