ಭಂಡ ಗಂಡ: ಪತ್ನಿ ಬೆರಳನ್ನೇ ಕಚ್ಚಿ ತಿಂದ!?
– ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ಘಟನೆ
– ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
NAMMUR EXPRESS NEWS
ಬೆಂಗಳೂರು: ಇಲ್ಲೊಬ್ಬ ಗಂಡ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ಹೌದು. ಈ ವಿಕೃತ ಘಟನೆ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಂಡತಿ ಜೊತೆ ಜಗಳವಾಡುತ್ತಿದ್ದಾಗ ಆಕೆಯ ಎಡಗೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ ಎನ್ನಲಾಗಿದೆ. ಪುಷ್ಪಾ (40) ಎಂಬ ಮಹಿಳೆಯ ಗಂಡ ವಿಜಯಕುಮಾರ್ ಬೆರಳನ್ನು ಕಚ್ಚಿ ತಿಂದ ಗಂಡನಾಗಿದ್ದಾನೆ.
23 ವರ್ಷಗಳ ಹಿಂದೆ ಪುಷ್ಪಾ ವಿಜಯ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದು ಈ ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದ ಕೆಲ ವರ್ಷಗಳಿಂದ ವಿಜಯ ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಆದರೆ ಜುಲೈ 28ನೇ ತಾರೀಕು ಪತಿ ವಿಜಯ ಕುಮಾರ್ ಪತ್ನಿ ವಾಸಿಸುತ್ತಿದ್ದ ಮನೆಗೆ ತೆರಳಿ ಜಗಳವಾಡಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್ ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಪತ್ನಿಗೆ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ರಾಜಧಾನಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಕೊಂದು, ನಂತರ ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯಲ್ಲಿ, ಮೃತಪಟ್ಟವರು ವಿಜಯ್(31), ಹೇಮಾವತಿ (29) ಹಾಗೂ ಇಬ್ಬರು ಹೆಣ್ಣುಮಕ್ಕಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆಯೇ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಮನೆಯಲ್ಲಿ ಇರುವ ನಾಲ್ವರು ಸಾವನ್ನಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿರುತ್ತದೆ. ಈ ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಆರಗ ಮೇಲೆ ಸುಮೋಟೋ ಕೇಸ್ ದಾಖಲಿಸಲು ಪಟ್ಟು
HOW TO APPLY : NEET-UG COUNSELLING 2023